Wednesday, November 30, 2016

ನಲ್ಲೆ

ಅನುಮಾನ ಬೇಡ ನಲ್ಲೆ
ನಾನು ನಿನ್ನಲ್ಲೆ
ನಿನ್ನೊಳಗಿನ ಭಾವದಲ್ಲಿ
ಬಂಧಿಯಾದೆನಲ್ಲೆ

ಹತ್ತಾರು ಕವನಗಳ
ಸ್ಪೂರ್ತಿ ನೀನು
ನೂರಾರು ಸಾಲುಗಳ
ಚಿಲುಮೆ ನೀನು
ನನ್ನ ಅಕ್ಷರಗಳ
ಸಾಕ್ಷಾತ್ಕಾರ ನೀನು

ಬೀಡು ನೀ ಮೌನ
ಸಂತೈಸಲು ಕಾಯುತ್ತಿದ್ದೆ
ನನ್ನ ಈ ಮನ

#ಸತೀಶಬಾರಿ

Tuesday, November 22, 2016

Hosa

ಪ್ರೀತಿಯಿಂದ ಜೊತೆಯಾಗಿ
ಸಾಗಿದ ಪಯಣಕ್ಕಿಗ ಬೆಲೆ ಇಲ್ಲಾವಾಯಿತೆ

ಎದೆಯಲ್ಲಿ ನೀ ಬರೆದ
ಕಾಮನಬಿಲ್ಲಿನ ಚಿತ್ತಾರ ಚಿಧ್ರವಾಯಿತೆ

Sunday, September 25, 2016

ಹೇಳಿ

ನೀ ಬರೆದ ಪತ್ರಕ್ಕೆ
ಹೇಗೆ ಉತ್ತರಿಸಲಿ
ನಾ ತಳಿಯೆ ನಲ್ಲೆ

ಬದುಕು ಒಂದು ಹರಕೆ
ಪ್ರೀತಿ ಅದಕ್ಕೆ ಮುಡಿಪು

Friday, August 19, 2016

Hosa

ಭಾರವಾದ ಜೀವನದಲ್ಲಿ
ನಿನ್ನ ನೆನಪುಗಳ ಹೊರ

ಎರವಲು ಕೊಡುವೆಯ
ಸಖಿ ಹಾ ನಿನ್ನ ಕಲ್ಲು ಮನಸ್ಸಾ
ತಾಳಲಾರೆನು ನೀ
ಇರದ ಈ ಸಮಯ

ನೋವಿನ ಕಣ್ಣಹನಿ
ಜಾರುತ್ತಿದೆ ನಿನ್ನ ಕಾಣದೆ
ಕಣ್ಣಹನಿಗಳಿಗೆ ಲೆಕ್ಕವಿಲ್ಲ
ಇನ್ನೂ ನಿನ್ನ ನೆನಪುಗಳೆ ನನಗೆಲ್ಲಾ 

ವರುಷಗಳು ಹುರುಳುತಿವೆ
ಹರುಷಗಳು ಕರಗುತ್ತಿವೆ
ನಿನ್ನ ಪ್ರೀತಿ ಇನ್ನೂ
ಮರಿಚಿಕೆಯಾಗುತ್ತಿದೆ.

ನಿನ್ನ ಜೊತೆ ನನಸಿನ
ಜೀವನದಲ್ಲಿ ಸಾಗಬೇಕೆಂದು ಕೊಂಡೆ
ಆದರೆ ನೀ ಇನ್ನೂ ಕನಸು

#ಸತೀಶಬಾರಿ

Tuesday, July 19, 2016

೧)ದೇವರನ್ನೇಕೆ ಹುಡುಕುವಿರಿ.
೨)ಆ ಧರ್ಮ ಈ ಧರ್ಮ ಅಂತೇಕೆ ಬಡಿದಾಡುವಿರಿ.
೩)ಬದುಕಿದ್ದಾಗ ಸಿಗದ ಸ್ವರ್ಗ ಸತ್ತ ಮೇಲೆ ಅನುಭವಿಸಲೇಕೆ ಆಸೆ ಪಡುವಿರಿ.

೧)ದೇವರನ್ನೇಕೆ ಹುಡುಕುವಿರಿ.
--------------------------------------

ಎಲ್ಲಿಯೂ ಕಾಣದ ದೇವರನ್ನೇಕೆ ಹುಡುಕುವಿರಿ, ದೇವರಿರುವನು ನಿಮ್ಮ ನಡುವೆ ಅದು ರೂಪದಲ್ಲಾದರು ಸರಿ, ದೇವರನ್ನು ಕಾಣುವ ಮಾನವೀಯ ಕಣ್ಣೀರಬೇಕು ಅಷ್ಟೇ.

     ದೇವರಿರುವನು ನಿಮ್ಮ ಮಕ್ಕಳ ರೂಪದಲ್ಲಿ, ತಂದೆತಾಯಿಯ ರೂಪದಲ್ಲಿ, ಮಡದಿ ರೂಪದಲ್ಲಿ, ಸಹೋದರ/ಸಹೋದರಿಯ ರೂಪದಲ್ಲಿ, ನಿಮ್ಮ ಸ್ನೇಹಿತರ ರೂಪದಲ್ಲಿ. ಕಷ್ಟದಲ್ಲಿ ನಿಮಗೆ ಸಹಾಯ ಮಾಡುವ ಜನರ ರೂಪದಲ್ಲಿ .

ನಿಮಗೂ ದೇವರಾಗುವ ಬಯಕೆ ಇದ್ದರೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ. ಕಷ್ಟಕಾಲದ ಸಹಾಯವೇ ಅವರಿಗೆ ವರ, ವರ ಕೊಡುವವನು ದೇವರು ಮಾತ್ರ ಅಲ್ಲವೆ.

೨)ಆ ಧರ್ಮ ಈ ಧರ್ಮ ಅಂತೇಕೆ ಬಡಿದಾಡುವಿರಿ.
----------------------------------------------------------------

ಧರ್ಮದ ಹೆಸರಲ್ಲಿ ಜಗತ್ತಿನ ತುಂಬಾ ಅದೆಷ್ಟೋ ಮಾರಣಾಹೋಮ ನಡೆದಿದೆಯೊ ಲೆಕ್ಕವಿಲ್ಲ. ಧರ್ಮದ ಹಣೆಪಟ್ಟಿ ಕಟ್ಟಿಕೊಂಡು ಅಧರ್ಮದ ದಾರಿಯಲ್ಲಿ ನಡೆಯುತ್ತಾ ರಕ್ತದೊಕುಳಿ ನಡೆಸುತ್ತಿರುವರನ್ನು ನೋಡಿದರೆ ಮನಸ್ಸು ಸಂಕಟವಾಗುತ್ತದೆ. ಧರ್ಮದ ಮೂಲ ಆಶಯವನ್ನು ಗಾಳಿಗೆ ತೂರಿದ ಕಟುಕರನ್ನು ಸರಿದಾರಿಗೆ ತರುವರಾರು? .

   ಧರ್ಮದ ವಿಚಾರದಲ್ಲಿ ಬಸವಣ್ಣನವರನ್ನು ನೆನೆಯಲೆಬೇಕು . "ದಯವೇ ಧರ್ಮದ ಮೂಲವಯ್ಯ" ಎಂದು ಒಂದೇ ವಾಕ್ಯದಲ್ಲಿ ಹೇಳಿದ ಮಹಾನ್ ಚೇತನ .

ನಿಜ ಧರ್ಮ ವೆಂದರೆ ದಯೇ , ಪ್ರೀತಿ, ಸ್ನೇಹ. ಜನರು ಪಾಲಿಸು ಪಂಥ ಯಾವುದೇ ಇರಲಿ,  ಸಕಲರನ್ನು ಪ್ರೀತಿಯದಿ , ಸ್ನೇಹದಿ ಕಾಣುವುದೇ ನಿಜವಾದ ಧರ್ಮ ಅದು ವಿಶ್ವಮಾನವನ ಧರ್ಮ .

೩)ಬದುಕಿದ್ದಾಗ ಸಿಗದ ಸ್ವರ್ಗ ಸತ್ತ ಮೇಲೆ ------------------------------------------------- ಅನುಭವಿಸಲೇಕೆ ಆಸೆ ಪಡುವಿರಿ.
---------------------------------------

ಮೇಲಿನ ಎರಡನ್ನೂ ಪಾಲಿಸಿದರೆ ಸ್ವರ್ಗ ನಿಮ್ಮೆದುರೆ ಮನಬಿಚ್ಚಿ ಕೊಳ್ಳಲಿದೆ.

#ಸತೀಶಬಾರಿ

Friday, July 15, 2016

Fb

ಮೊದಲನೆಯ ಮದುವೇ ಆಗುವ ಇರುವ ಕಷ್ಟ

ಎರಡನೇ ಮದುವೆ ಆಗುವಾಗ ಆ ಕಷ್ಟ ಇರುವುದಿಲ್ಲವಂತೆ

Experience's make's man perfect

Saturday, July 2, 2016

ಮುಂದುವರೆಯುತ್ತದೆ

ಕಣ್ಣ ತುಂಬಿಕೊಬೇಡ ಸಖಿ
ನೋಡಲಾಗದು ನಿನ್ನ ಅಳುಮೊಗವ

ನಿನ್ನ ಕಣ್ಣ ರಪ್ಪೆಯಾಗಿ ನಾನಿರುವೆ
ನಿನ್ನ ಕಣ್ಣ ಹನಿಗೆ ನಾನೇ ಮೊದಲು ತೊಯುವೆ

ಅರಿಯಬಲ್ಲೆ ನಿನ್ನ ಹೃದಯ ಭಾಷೆಯ
ನಾ ತಿಳಿಯ ಬಲ್ಲೆ ನಿನ್ನ ಭಾವನೆಯ

ಬಾ ನಿನ್ನ ಇನಿಯನ ಸನಿಹ
ಅಪ್ಪಿಕೊಂಡು ಮರೆಸುವೆ ನಿನ್ನ ದುಃಖವ

Thursday, June 30, 2016

ಮುಂದುವರೆಯುತ್ತದೆ

ಹೃದಯ ಸಿರಿವಂತರೊ ನಾವು
ಹೃದಯ ಸಿರಿವಂತರೊ

ಹೊಟ್ಟೆಗೆ ಹಿಟ್ಟಿಲ್ಲ
ತಲೆಗೆ ಸುರಿಲ್ಲ
ಆದರೂ ನಮ್ಮ ಘನತೆಗೆನು
ಕಮ್ಮಿ ಇಲ್ಲ

ಹಣಕ್ಕೆ ಬೆಲೆಯಿಲ್ಲ
ಪ್ರೀತಿಗೆನೂ ಕಮ್ಮಿಯಿಲ್ಲ
ಗೌರವಕ್ಕೆ ತಲೆ ಬಾಗುವೆವು ನಾವೆಲ್ಲ

ಜಾತಿ ಧರ್ಮಗಳ ಬೇಲಿ ಇಲ್ಲ
ಮೇಲು/ಕೀಳಿನ ಭೇದ ಭಾವವಿಲ್ಲ
ಸ್ನೇಹವೇ ಜೀವ ನಮಗೆಲ್ಲ

ಜೀವನವನ್ನು ಅನುಭವಿಸುತ್ತೆವೆ
ಅದು ಎಷ್ಟೇಂದರೆ
ಸಾವಿಗೆ ಅಂಜುವುದಿಲ್ಲ
ನಗುವಿಗೆನೂ ಕೊರತೆಯಿಲ್ಲ

ಯಾಕೆಂದರೆ -

         ನಾವು ಹೃದಯ ಸಿರಿವಂತರು

#ಸತೀಶಬಾರಿ

Tuesday, June 28, 2016

ನನ್ನಾಕೆ

ನನ್ನವಳ ನೋಟಕ್ಕೆ
ಮೇಘರಾಜನು ಕರಗಿ 
ಭೂಮಿಗೆ ಬರುವ

ಅವಳು ಬರುವ ದಾರಿಲಿ
ಗಿಡಮರಗಳಿಗೂ ಬಿಸಣಿಕೆಯಾಗಿ
ಬಿಸುವ ಆಸೆ

ನನ್ನವಳು ಕಂಡರೆ
ಮಿಂಚಿಗು ಅವಸರ
ಅವಳ ಛಾಯಾಚಿತ್ರ
ತೆಗೆಯುತ್ತದೆ ಸರಸರ 

ಅಮಾವಾಸ್ಯೆಯ ಕತ್ತಲೆಯಲ್ಲಿ
ನನಗೆ ನನ್ನವಳೆ ಹುಣ್ಣಿಮೆಯ
ಚಂದಿರನ ಬೆಳಕು

ನನ್ನವಳ ನೋಡಲು
ಸೂರ್ಯ ಚಂದ್ರರಿಗೂ
ನಿತ್ಯವು ಜಗಳ
ಅವನು ಇಲ್ಲದಿದ್ದರೆ ಇವನು ಬರುವ
ಇವನು ಇಲ್ಲದಿದ್ದರೆ ಅವನು ಬರುವ

#ಸತೀಶಬಾರಿ

Monday, May 30, 2016

Wait

ನೋಡು ಹೃದಯವಿಗ
ನೂರಾರು ಚುರು

ನಿನ್ನ ಧ್ವನಿ ಕೇಳಿಸಿದ ಪ್ರತಿ
ಸಮಯವು ಮೌನ ವ್ರತ

ಗೆಳತಿ ಏನೋ ಹೇಳಬೇಕೆಂದಿರುವೆ
ನಿನಗಾಗಿ ಏನೋ ಬರೆಯಬೇಕೆಂದಿರುವೆ

ನಿನ್ನ ಹೆಸರಲ್ಲೇ ಬರೆಯುತ್ತಿರುವೆ
ಒಂದು ಪ್ರೇಮದ ಓಲೆಯ

ಪ್ರತಿ ಸಾಲಿನಲ್ಲಿ ಬಿಡುಬಿಟ್ಟರುವುದು
ನಿನ್ನ ಪ್ರೇಮದ ಸಿಂಚನ

ನಿನ್ನ ನೆನಪಲ್ಲೆ ಪ್ರತಿ ಅಕ್ಷರಗಳನ್ನು
ಪದಗಳಾಗಿ ಪೋಣಿಸಿರುವೆ

ಒಲವೇ ನಿನಗಾಗಿ ಬರೆಯುತ್ತಿರುವೆ
ನೀನಿಂದಾಗಿ ಬರೆಯುವದ ಕಲಿತೆ 

ಒಂದೇ ಆಸೆ ಈ ಜೀವಕೆ
ಉಸಿರಿರುವ ತನಕ ನಿನಗಾಗಿಯೇ ಬರೆಯುವೆ

Monday, May 16, 2016

ಪ್ರೇಮಿ

ಪ್ರತಿ ಕ್ಷಣವು ನಿನಗಾಗು ಪರಿತಪಿಸು ಈ ಮನ
ಎದೆಯಾಳ ಬಗೆ ದಷ್ಟು ನಿನ್ನದೇ ಚಿತ್ತಾರ

Sunday, May 15, 2016

ಡೊಂಗಿ

ಮುಖವಾಡದ ಸಂಭಂದಗಳೆಕೊ
ವಾತ್ಸಲ್ಯವಿಲ್ಲದ ಪ್ರೀತಿ ಯಾಕೋ

Monday, April 25, 2016

ಅವಳೆ ನಾನಾದೆ

ನನ್ನಲ್ಲಿ ನೀ ಬೆರೆತಾಗ
ನನ್ನನ್ನು ನಾ ಮರೆವೆ ಆಗ

ನೀ ಜೊತೆಯಾದಗ
ಖುಷಿ ನೂರಾದಾಗ
ನನ್ನ ಹಿಡಿತಕ್ಕೆ ನಾ ಸಿಗುತ್ತಿಲ್ಲ

ಪ್ರೀತಿಯ ಜ್ವರ ಬಲು ಜೋರಾಗಿ
ನಿನ್ನ ಕಾಣುವಿಕೆಯೇ ನನಗೆ ಔಷಧಿಯಾಗಿ

ಅಯ್ಯೋ ನನಗೇನಾಗಿದೆ
ನನ್ನನ್ನೇ ನಾ ಹುಡುಕಬೇಕಾಗಿದೆ

#ಸತೀಶಬಾರಿ

Tuesday, March 8, 2016

ನನ್ನವಳೆ ಬಂಗಾರ

ನನ್ನವಳಿಗೆಕೇ
ಬಂಗಾರದ ಸಿಂಗಾರಾ
ಅವಳ ನಗುವೇ
ಅವಳಿಗೆ ಒಡವೆಗಳ ಸಿಂಗಾರ ||

ಅವಳಿಗಿಲ್ಲ
ಬಂಗಾರದ ಹುಚ್ಚು
ಯಾಕೆಂದರೆ
ಅವಳಿಗೆ ನಾನೇ 
ಅಚ್ಚು-ಮೆಚ್ಚು||

ಒಂದು ಕ್ಷಣವು
ಅವಳು ಕಾಣದಿದ್ದರೆ
ನಸುಬಾಡುತ್ತದೆ ನನ್ನ ಮನ
ಅವಳಿಟ್ಟ ಪ್ರೀತಿಯ ಕಚಗುಳಿಗೆ
ಭಾವಾಯಾನದಲ್ಲಿ ತೇಲಾಡುತ್ತಿದೆ
ಈ ಬಡಪಾಯಿ ಮನ||

#ಸತೀಶಬಾರಿ

Thursday, March 3, 2016

ದಾರಿ ಕಾಣದಾಗಿದೆ ಶಿಶುನಾಳದೀಶ

ಒಡಲಾಳದ ನೋವು
ತಿಳಿಯದು ಯಾರಿಗೂ
ಜಗತ್ತೇ ಹೊರಗೊಂದು
ಒಳಗೊಂದು ಬದುಕುತ್ತಿರುವಾಗ
ನನ್ನ ನೋವು ಅರಿವರಾರು..? ||

ಇಲ್ಲಿ ಭಾವನೆಗಳಿಗೆ ಬೆಲೆಯಿಲ್ಲ
ನಾಟಕವೇ ಎಲ್ಲಾ
ಸಂಬಂಧಗಳು ಹಳಸುತ್ತಿರುವಾಗ
ಹೊನ್ನಿಗಾಗಿ ಮಣ್ಣಿಗಾಗಿ
ಬಡಿದಾಡುವವರೇ ಎಲ್ಲಾ ||

ಎಲ್ಲಿ ಹುಡುಕಲಿ ಸ್ವಚ್ಛ ಬದುಕು
ಕಾಣದಾಗಿದೆ ಉತ್ತಮ ಸಮಾಜ
ಹುಡುಕುತ್ತಿರುವೆ ವಿಶ್ವಮಾನವನ ಸಮೂಹ.

#ಸತೀಶಬಾರಿ

Tuesday, March 1, 2016

ಬಸವಣ್ಣನ ನನ್ನೊಳಗೆ

ನನ್ನ ಕೈಯಲ್ಲಿ ಇಷ್ಟಲಿಂಗವಿರುವಾಗ
ನಾನೇಕೆ ಅಸ್ತರೇಖೆಯನ್ನು ನಂಬಲಯ್ಯಾ

ನನ್ನ ಹಣೆಯಲ್ಲಿ ವಿಭೂತಿ ಇರುವಾಗ
ನಾನೇಕೆ ಹಣೆಬರಹವನ್ನು ಮೆಚ್ಚಿಕೊಳ್ಳಲಯ್ಯಾ

ಕೂಡಲಸಂಗಮದೇವನು ನನ್ನಲ್ಲಿರುವಾಗ
ನಾನೇಕೆ ಊರಾ ದೇವರ ಹುಡುಕಲಯ್ಯಾ

ಅಣ್ಣ ಬಸವಣ್ಣ ನೀ ತೋರಿಸಿಕೊಟ್ಟ
ಧರ್ಮದ ದಾರಿ ಇರುವಾಗ
ನಾನೇಕೆ ಅಧರ್ಮದ
ದಾರಿಯಲ್ಲಿ ನಡೆಯಲಯ್ಯಾ .

#ಸತೀಶಬಾರಿ

Thursday, February 25, 2016

ನನ್ನ ಭಾರತ ನನ್ನ ಹೆಮ್ಮೆ

ಜಾತಿ ಧರ್ಮವನ್ನು ಮರೆಯೊಣಾ
ಭಾರತದ ಏಕತೆಗಾಗಿ ನಡೆಯೊಣಾ

ದೇಶದ್ರೋಹಿಗಳು ದೇಶವೈರಿಗಳು
ಯಾರೇ ಆಗಿರಲಿ ಸದೆ ಬಡೆಯೊಣಾ
ಭಾರತಕ್ಕಾಗಿ ದುಡಿಯೊಣಾ

ದೇಶ ಸೇವೆಯು ದೇವರ ಸೇವೆಯು
ದೇಶವೇ ನಮ್ಮ ಉಸಿರು, ನಮ್ಮ ಸರ್ವಸ್ವ

ಭಾರತವು ಸುಮ್ಮನೇ ದೇಶವಾಗಿಲ್ಲವೊ
ಸಾವಿರಾರು ವರ್ಷಗಳ ಇತಿಹಾಸ
ಉಂಟು ನೀ ತಿಳಿಯೋ

ಸ್ವತಂತ್ರ್ಯಕ್ಕಾಗಿ ದೇಶದ ಜನರ
ರಕ್ತದ ಕೊಡಿ ಹರಿದು
ಶೂರರ ಧೀರರ ದೇಶ ಭಾರತ

ನೂರಾರು ದೇಶಗಳಿರಬಹುದು
ನಮ್ಮ ಭಾರತ ನಮಗೆ ಶ್ರಷ್ಠ

ಬನ್ನಿ ಸಹೋದರ ಸಹೋದರಿಯರೆ
ಭಾರತಕ್ಕಾಗಿ ದುಡಿಯೊಣಾ
ಭಾರತಕ್ಕಾಗಿ ನಡೆಯೊಣಾ

ನನ್ನ ಭಾರತ ನನ್ನ ಹೆಮ್ಮೆ

#ಸತೀಶಬಾರಿ

Tuesday, February 23, 2016

ಗೆಳತಿ

ನನ್ನ ಭಾವನೆಯ ಲೋಕದ ಗೆಳತಿ
ಹೆಜ್ಜೆ ಇಡುವೆಯಾ ನನ್ನೊಡನೆ
ಬರುವೆಯಾ ಮೆಲ್ಲನೆ ||

ಮೆಲ್ಲನೆ ನಡೆದು ಬಿಡು ನನ್ನೊಡನೆ
ಮತ್ತೆ ನನ್ನ ಬಿಟ್ಟು
ಹೋಗಲಾರದಷ್ಟು ದೂರವ ||

ನೀನೆ ನನ್ನ ಲೋಕದ ಒಡತಿಯಾಗರುವಾಗ
ಇನ್ನೆಕೇ ದೂರವಾಗುವ ಮಾತು
ಪ್ರತಿ ಕ್ಷಣವು ನಿನ್ನ ಹಾಜರಾತಿ
ಬಯಸುತ್ತಿದೆ ನನ್ನ ಈ ಮನ||

ನೋಡು ಒಂದು ಸಾರಿ
ನನ್ನ ಮನಸ್ಸಿನ ಅವ್ಯವಸ್ಥೆಯ
ಬಿಳಿ ಹಾಳೆಯಾಗಿತ್ತು ನನ್ನ ಈ ಮನ
ಮೃದು ಮನಸ್ಸಿನ ಮೇಲೆ
ನಿನ್ನದೆ ಭಾವನೆಗಳ ಚಿತ್ತಾರ ||

#ಸತೀಶಬಾರಿ

Saturday, February 20, 2016

ಸಾಮರಸ್ಯ ಜೀವನ

ಸಾಮರಸ್ಯ ಜೀವನ
_____________________

ಪ್ರತಿಯೊಬ್ಬರನ್ನು ಪ್ರೀತಿಸಿ ಗೌರವವಿಸುವುದು, ಮನುಷ್ಯನು ಮತ್ತೊಬ್ಬ ಮನುಷ್ಯನ ಜೊತೆ ಒಳ್ಳೆಯ ಸಹ-ಜೀವನವನ್ನು ಹೊಂದಬೇಕು, ಸಹೃದಯತೆಯಿಂದ ಜೀವಿಸಬೇಕು ಎಂಬ ಕಲ್ಪನೆಯೇ "ಸಾಮರಸ್ಯ".

     ನಾವೆಲ್ಲರೂ ಒಂದೇ ನಮ್ಮಲ್ಲಿ ಸೈದ್ಧಾಂತಿಕ ಅಭಿಪ್ರಾಯಗಳು ಬೇರೆ ಬೇರೆ ಇರಬಹುದು ಆದರೆ, ನಾವೆಲ್ಲರೂ ಮನುಷ್ಯರು ಎಂಬ ಭಾವನೆ, ಪ್ರೀತಿ ನಮ್ಮಲ್ಲಿ ಬರಬೇಕು. ಮನುಷ್ಯ ತನ್ನ ಮನಸ್ಸಿಗೆ ಹಾಕಿಕೊಂಡಿರುವ ಜಾತಿ ಧರ್ಮ ಎಂಬ ಬೇಲಿಯಿಂದ ನರಳಾಡಿ ಬಡಿದಾಡಿ ತನಗೂ ಸುಖವಿಲ್ಲ ಇನ್ನೊಬ್ಬರಿಗು ಸುಖವಿಲ್ಲದೆ ಬಾಳುತ್ತಿರುವುದು ಅಸಹ್ಯ ಸಂಗತಿ.    ಮನುಷ್ಯನು ಸಂಕುಚಿತ ಮನಸ್ಸಿಂದ ಹೊರಬರಲೆಬೇಕು, ಇಲ್ಲವಾದರೆ ಮನುಷ್ಯನಿಗೆ ಉಳಿಗಾಲವಿಲ್ಲ .

ಸಾಮರಸ್ಯ ಜೀವನವೇ ಒಂದು ಅದ್ಭುತವಾದ ಅನುಭವ. ಅದರಲ್ಲೂ ಭಾರತೀಯರು ವಿಶ್ವಕ್ಕೆ ಸಾಮರಸ್ಯ ಜೀವನ ಎಂದರೆ ಏನು ಅಂತ ತೋರಿಸಿಕೊಟ್ಟವರು, ಭಾರತೀಯರ ಸಾಮರಸ್ಯ ಮತ್ತು ಜೊತೆಯಾಗಿ ಕೂಡಿಬಾಳುವಿಕೆಯ ಸಂಸ್ಕೃತಿಯೇ "ಭಾರತದ ಹೆಗ್ಗುರುತು"

"ವಸುದೈವ ಕುಟುಂಬಕಂ" ಎಂದು ವಿಶ್ವಕ್ಕೆ ಸಾರಿದ ದೇಶ ಭಾರತ, ಎಂತಹ ಅದ್ಭುತ ಭಾವ ಭಾರತೀಯರದ್ದು ಇಡೀ ವಿಶ್ವವೇ ಒಂದು ಕುಟುಂಬ ಅದರಲ್ಲಿ ನಾನು ಒಬ್ಬ ಎಂಬ ಭಾವನೆ ಪ್ರತಿಯೊಬ್ಬ ಭಾರತೀಯನದ್ದು .

ಶರಣ ಶ್ರೀ ಬಸವಣ್ಣನವರು

ಇವನಾರವ ಇವನಾರವ
ಇವನಾರವನೆಂದೆನಿಸದಿರಯ್ಯ
ಇವ ನಮ್ಮವ ಇವ ನಮ್ಮವ
ಇವ ನಮ್ಮವನೆಂದೆನಿಸಯ್ಯಾ
ಕೂಡಲಸಂಗಮ ದೇವಯ್ಯಾ
ನಿಮ್ಮ ಮನೆಯ
ಮಗನೆಂದೆನಿಸಯ್ಯಾ

ಹೇಳಿದ ಹಾಗೆ,
ಮನುಷ್ಯನು ಮನುಷ್ಯನನ್ನು ಯಾವ ಜಾತಿ ಯಾವ ಧರ್ಮ ಅಂತ ನೋಡದೆ ಪ್ರತಿಯೊಬ್ಬರು ನಮ್ಮವರು
ಎಂಬ ಭಾವನೆ ನಮ್ಮಲ್ಲಿ ಬಂದಾಗ ಜೀವನವು ಶಾಂತಿಯಿಂದ ಸಾಗಲಿದೆ.

ಒಂದು ದೇಶವು ಸಂಪೂರ್ಣ ಸ್ವಾವಲಂಬನೆಯಾಗಬೇಕಾದರೆ ಆ ದೇಶದ ಜನರ ಸೌಹಾರ್ದತೆ ಮತ್ತು ಸಾಮರಸ್ಯ ಜೀವನವು ತುಂಬ ಪ್ರಮುಖ ಪಾತ್ರವಹಿಸುತ್ತದೆ. ಒಬ್ಬ ವ್ಯಕ್ತಿಯು, ಒಂದು ಸಮಾಜವು, ಒಂದು ದೇಶವು ಭೌತಿಕವಾಗಿ ಮತ್ತು ಬೌದ್ಧಿಕವಾಗಿ ಸಾಮರಸ್ಯ ಜೀವನ ನಡೆಸಿದರೆ ಉತ್ತಮ ಬೆಳವಣಿಗೆ ಕಾಣಬಹುದು, "ಭಾರತವು ಆ ದಿಶೆಯಲ್ಲಿ ಸಾಗಲಿ ಅಂತ ಹಾರೈಸುವ" .

ಜೈ ಭಾರತ , ವಂದೇ ಮಾತರಂ

#ಸತೀಶಬಾರಿ

Wednesday, February 17, 2016

ಗೆಳತಿ

ನಿನ್ನ ಹೃದಯದ
ಬಾಗಿಲಿಗೆ ಬಂದಿರುವೆ
ಒಳ ಬರಲು ಅಪ್ಪಣೆಯೇ
ಗೆಳತಿ ||

ಪ್ರೀತಿ ಕನಸು
ಹೊತ್ತು ಬಂದಿರುವೆ
ನಿನ್ನ  ಒಲವ
ಬಯಸಿ ನಿಂತಿರುವೆ
ಜೊತೆಯಿರಲು
ಅಪ್ಪಣೆಯೇ ಗೆಳತಿ||

ಇಳಿಸಂಜೆಯ ತಂಗಾಳಿಯು
ನಮ್ಮಿಬ್ಬರಿಗಾಗಿಯೇ ಬೀಸಿದ
ನಿನ್ನ ಕೈಹಿಡಿದು
ನಡೆವ ಬಯಸಿರುವೆ
ಬಂದು ಬಿಡು ಒಂದು ಸಾರಿ
ಹೆಜ್ಜೆ ಇಡು ನನ್ನ
ಭಾವನೆಗಳ ಲೋಕಕ್ಕೆ ಗೆಳತಿ ||

#ಸತೀಶಬಾರಿ

Monday, February 1, 2016

ತಪ್ಪು

ತಪ್ಪು ಮಾಡಬೇಡಯ್ಯಾ

ನೀ ತಿಳಿದು ತಿಳಿದು
ತಪ್ಪು ಮಾಡಬೇಡಯ್ಯಾ

ನಿನ್ನ ತಪ್ಪಿನಿಂದ ಇನ್ನೊಬ್ಬರಿಗೆ
ತೊಂದರೆಯಾಗಬಾರದಯ್ಯಾ

ತಪ್ಪು ಮಾಡದವರು ಯಾರಿಲ್ಲವಯ್ಯಾ
ತಪ್ಪಿಗೆ ಶಿಕ್ಷೆ ನಿನ್ನ ತಪ್ಪೊಪ್ಪಿಗೆವಯ್ಯಾ

ನಿನ್ನ ತಪ್ಪನ್ನು ಇನೊಬ್ಬರು
ಕ್ಷಮಿಸಿದರೆ ಅದು ಅವಕಾಶವಯ್ಯಾ

ನಿನ್ನ ತಪ್ಪನ್ನು ನೀನೇ
ತಿದ್ದಿ ನಡೆದರೆ ಅದೇ
ಸದವಕಾಶವಯ್ಯಾ


#ಸತೀಶಬಾರಿ

Sunday, January 31, 2016

ಸಮಸ್ಯೆ

ಹುಟ್ಟುವ ಮುನ್ನವೇ
ಭ್ರೂಣ ಹತ್ಯಯಾದ
ಕಂದಮ್ಮಗಳೆಷ್ಟೊ

ಬೆಳೆದ ಬೆಳೆ ಕೈಗೆ
ಬರುವ ಮುನ್ನವೇ
ಸಾಲಕ್ಕೆ ಸತ್ತ ರೈತರೆಷ್ಟೊ

ಸಂಸಾರ ಜವಾಬ್ದಾರಿ
ಹೊರುವ ಮುನ್ನವೇ
ವರದಕ್ಷಿಣೆ ಕಿರುಕುಳಕ್ಕೆ
ಹತ್ಯಯಾದ ಸಹೋದರಿಯರೆಷ್ಟೊ

ಉದ್ಯೋಗ ಸಿಗುವ
ಮುನ್ನವೇ ನಿರುದ್ಯೋಗಿಗಳಾಗಿ
ಸತ್ತ ವಿದ್ಯಾವಂತರೆಷ್ಟೊ

ಸಾಕು ಮಾಡೋಣ
ಸಮಸ್ಯೆಗಳ ಲೆಕ್ಕ
ಹಾಕುವುದನ್ನು

ನಿಲ್ಲಿಸಬೇಕಿದೆ ಅನ್ಯಾಯದ
ಆರ್ಭಟ
ಹೋರಾಡಬೇಕಿದೆ ಸಮಸ್ಯೆಗಳ
ವಿರುದ್ಧ

#ಸತೀಶಬಾರಿ

Wednesday, January 27, 2016

ಭಾವನೆ

ಭಾವನೆ ಬದಲಾಗಿ ಪ್ರೀತಿಗೆ ಸೋತೊಗಿ

Tuesday, January 19, 2016

ಧರ್ಮಾಂಧರ ಬಾವಿ ಇದು

ಧರ್ಮಾಂಧರ ಬಾವಿಯಲ್ಲಿ
________________________

ಧರ್ಮಾಂಧರ ಬಾವಿ ಇದು
ಮನುಜ ನೀನಿಲ್ಲಿರಲು
ಮನುಷ್ಯನಾಗಿ ಯೋಗ್ಯನಲ್ಲ

ಇದು ಬಾವಿಯಲ್ಲವೊ
ಮೇಲು/ಕೀಳಿನ ಕೊಚ್ಚೆ
ನಿನಗಿಲ್ಲಿ ಈಜಲು ಬರುವುದಿಲ್ಲ

ಧರ್ಮಾಂಧ ಬಾವಿ ಇದು
ದುಷ್ಟರ ಕೊಂಪೆ ಇದು
ಮನುಷ್ಯತ್ವಕ್ಕೆ ಬೆಲೆಯಿಲ್ಲವೊ

ಅದರಲ್ಲಿರುವುದು ನೀರಲ್ಲವೊ ಮೂಢ
ಮತಾಂಧವೆಂಬ ವಿಷ
ಅದಕ್ಕೆ ಅಂಟಿಕೊಳ್ಳಬೇಡವೊ
ಅದನ್ನು ಕುಡಿಯಲು ಬೇಡವೋ

ರಾಕ್ಷಸರ ಬಾವಿ ಇದು
ನೀ ಇಣುಕಲು ಬೇಡವೋ

ದೂರ ಹೋಗಿ ಬಿಡು
ಮನುಷ್ಯನಾಗಿ ಬದುಕು
ಪ್ರೀತಿಸು ಎಲ್ಲರನ್ನೂ ಗೆಲ್ಲು

ಧರ್ಮಾಂಧರ ಬಾವಿ ಇದು

#ಸತೀಶಬಾರಿ

Saturday, January 16, 2016

ಜಾತಿ ರಾಜಕಾರಣಿಗಳು ಇವರು ಜಾತಿ ರಾಜಕಾರಣಿಗಳು

ಜಾತಿ ರಾಜಕಾರಣಿಗಳು ಇವರು ಜಾತಿ ರಾಜಕಾರಣಿಗಳು .

ಚುನಾವಣೆ ಬಂದಾಗ ಮರೆಯದೆ
ಬರುವರು ಆಮೇಲೆ
ಅಣ್ಣ ನಿನ್ನನೇ ಮರೆಯುವರು
ನೋಟು ತೋರಿಸುವರೊ
ಅಣ್ಣ ಆಮೇಲೆ
ನಿನ್ನನೇ ಲೂಟಿಮಾಡುವರೊ||

ಜಾತಿ ರಾಜಕಾರಣಿಗಳು ಇವರು ಜಾತಿ ರಾಜಕಾರಣಿಗಳು

ದೊಡ್ಡ ದೊಡ್ಡ ಭಾಷಣ ಮಾಡುವರೊ
ಅಣ್ಣ ಆಮೇಲೆ
ನಿನ್ನ ಮಾತು ಕೆಳದವರೊ
ಚುನಾವಣೆಯಲ್ಲಿ ಬರೀ
ಆಶ್ವಾಸನೆ ಕೊಡುವರೊ
ಅಣ್ಣ ಆಮೇಲೆ ನಿನ್ನ
ವಾಸನೆಯು ನೋಡದವರೊ||

ಜಾತಿ ರಾಜಕಾರಣಿಗಳು ಇವರು ಜಾತಿ ರಾಜಕಾರಣಿಗಳು 

ಎಲ್ಲರಿಗೂ ನಾಯಕರಾಗಬೇಕಾದವರೊ
ಅಣ್ಣ ಇವರು ಜಾತಿಗೆ ನಾಯಕರಾದವರೊ
ಸಮಾಜಕ್ಕೆ ದುಡಿಯಬೇಕಾದವರೊ
ಅಣ್ಣ ಇವರು ತಮ್ಮ ಮನೆಗೆ
ತುಂಬುತ್ತಿರುವರೊ||

ಜಾತಿ ರಾಜಕಾರಣಿಗಳು ಇವರು ಜಾತಿ ರಾಜಕಾರಣಿಗಳು

ಜಗಳಕ್ಕೆ ಬೇರೆಯವರ ಮಕ್ಕಳನ್ನು
ಎಳೆದು ತರುವರೊ ಇವರು
ಅಣ್ಣ
ತಮ್ಮ ಮಕ್ಕಳನ್ನು
ಮನೆಯಲ್ಲಿಯೇ ಜೋಪಾನ ಮಾಡುವರೊ
ಜಾತಿಯ ಹೆಸರಲ್ಲಿ ರಾಜಕೀಯ
ಮಾಡುವರೊ ಅಣ್ಣ
ಸಮಾಜವನ್ನು ಅಂಧಕಾರದಲ್ಲಿ
ತಳ್ಳುವರೊ||

ಜಾತಿ ರಾಜಕಾರಣಿಗಳು ಇವರು ಜಾತಿ ರಾಜಕಾರಣಿಗಳು.

#ಸತೀಶಬಾರಿ

(ವಿ.ಸೂ. ಈ ಲೇಖನವು ವ್ಯಕ್ತಿಗತ ಯಾರ ವಿರುದ್ಧವೂ ಅಲ್ಲ ಮತ್ತು ಯಾರನ್ನು ನೋವು ಮಾಡಲಿಕ್ಕೆ ಅಲ್ಲ )

ಅಂಬೆಯ ಕೂಗು ಇದು ಕತೆಯಲ್ಲ ಗೋವಿನ ವ್ಯಥೆ

ಅಂಬೆಯ ಕೂಗು ಇದು
ಕತೆಯಲ್ಲ ಗೋವಿನ ವ್ಯಥೆ

ಒಬ್ಬರು ಆಹಾರ ಅಂತ ಕೊಲ್ಲುವರು
ಇನ್ನೊಬ್ಬರು ದೇವರು ಅಂತ ಹೇಳಿ
ದೇವರ ಮುಂದೇನೆ ಕೊಲ್ಲುವರು
ಇಬ್ಬರ ನಡುವೆ ರಾಜಕೀಯ
ಮಾಡುತ್ತಿರುವನು ಒಬ್ಬನು||

           ನಿಮ್ಮ ನಿಮ್ಮ ಸ್ವಾರ್ಥಕ್ಕೆ ಗೋವನ್ನು
           ಉಪಯೋಗಿಸುತ್ತಿರುವಿರಿ
          ಗೋವಿನ ಹೆಸರಲ್ಲೇ ರಾಜಕೀಯ
         ಮಾಡುವಿರಿ
           ಎಲ್ಲವೂದಕ್ಕು ಉಪಯೋಗವಾಗುವುದು
           ಗೋವು
           ಯಾವುದಕ್ಕೂ ಉಪಯೋಗವಾಗದವನ್ನು
           ಮನುಜ||

ತನ್ನ ಜೀವನವೀಡಿ ಜಗತ್ತಿಗೇ
ಅನ್ನ ಕೊಡುವವನು ರೈತನಾದರೆ
ತನ್ನ ಜೀವನವಿಡೀ ಜಗತ್ತಿಗೆ
ಹಾಲು ಕೊಡುವುದು ಗೋವು
ರಕ್ಷಿಸಬೇಕಿದೆ ಸ್ಥಳೀಯ
ಗೋವಿನ ಸಂತತಿಯನ್ನು||

ನೆನಪಿರಲಿ ಮನುಜ ನಿನ್ನ ಎಲ್ಲಾ ದುಷ್ಟ ನಡತೆಗಳಿಗೆ
ಮುಂದೆ ಒಂದು ದಿನ ಕುಡಿಯಲು ಒಂದು ಹನಿ ನೀರು ಸಿಗಲಾರದ ಸಮಯ ಬರಬಹುದು ..

#ಸತೀಶಬಾರಿ

ಅಂಬೆಯ ಕೂಗು ಇದು ಕತೆಯಲ್ಲ ಗೋವಿನ ವ್ಯಥೆ

ಅಂಬೆಯ ಕೂಗು ಇದು
ಕತೆಯಲ್ಲ ಗೋವಿನ ವ್ಯಥೆ


ಒಬ್ಬರು ಆಹಾರ ಅಂತ ಕೊಲ್ಲುವರು
ಇನ್ನೊಬ್ಬರು ದೇವರು ಅಂತ ಹೇಳಿ
ದೇವರ ಮುಂದೇನೆ ಕೊಲ್ಲುವರು
ಇಬ್ಬರ ನಡುವೆ ರಾಜಕೀಯ
ಮಾಡುತ್ತಿರುವನು ಒಬ್ಬನು||

           ನಿಮ್ಮ ನಿಮ್ಮ ಸ್ವಾರ್ಥಕ್ಕೆ ಗೋವನ್ನು
           ಉಪಯೋಗಿಸುತ್ತಿರುವಿರಿ
          ಗೋವಿನ ಹೆಸರಲ್ಲೇ ರಾಜಕೀಯ
         ಮಾಡುವಿರಿ
           ಎಲ್ಲವೂದಕ್ಕು ಉಪಯೋಗವಾಗುವುದು
           ಗೋವು
           ಯಾವುದಕ್ಕೂ ಉಪಯೋಗವಾಗದವನ್ನು
           ಮನುಜ||

ತನ್ನ ಜೀವನವೀಡಿ ಜಗತ್ತಿಗೇ
ಅನ್ನ ಕೊಡುವವನು ರೈತನಾದರೆ
ತನ್ನ ಜೀವನವಿಡೀ ಜಗತ್ತಿಗೆ
ಹಾಲು ಕೊಡುವುದು ಗೋವು
ರಕ್ಷಿಸಬೇಕಿದೆ ಸ್ಥಳೀಯ
ಗೋವಿನ ಸಂತತಿಯನ್ನು||

ನೆನಪಿರಲಿ ಮನುಜ ನಿನ್ನ ಎಲ್ಲಾ ದುಷ್ಟ ನಡತೆಗಳಿಗೆ
ಮುಂದೆ ಒಂದು ದಿನ ಕುಡಿಯಲು ಒಂದು ಹನಿ ನೀರು ಸಿಗಲಾರದ ಸಮಯ ಬರಬಹುದು ..

#ಸತೀಶಬಾರಿ

Thursday, January 14, 2016

ನನ್ನ ವಿವೇಕಾನಂದರು

ಅವಿವೇಕಿಯಾಗಿದ್ದವನನ್ನು
ವಿವೇಕನ್ನಾಗಿ ಮಾಡಿದರು

ಅಜ್ಞಾನಿಯಾಗಿದ್ದವನನ್ನು
ಜ್ಞಾನಿಯನ್ನಾಗಿ ಮಾಡಿದರು

ಎತ್ತಲೋ ಸಾಗಿದ ಜೀವನವನ್ನು
ಸನ್ಮಾರ್ಗದ ಹಾದಿಯಲ್ಲಿ ಸಾಗಿಸಿದರು

ಕಲ್ಮಶಗಳನ್ನು ತುಂಬಿಕೊಂಡಿದ್ದ ಮನವನ್ನು
ನಿಷ್ಕಲ್ಮಶ ಮನವನ್ನಾಗಿಸಿದ್ದರು

ನನ್ನ ಗುರುಗಳಾದವರು
ನನ್ನ ಬದುಕಿನ ದಾರಿದೀಪವಾದವರು

ಅವರೇ ನನ್ನ

           "ಸ್ವಾಮಿ ವಿವೇಕಾನಂದರು"

#ಸತೀಶಬಾರಿ

ನಾಳೆಯ ಬದುಕಿನ ಮುನ್ನುಡಿ

ನಾಳೆಯ ಬದುಕಿನ ಮುನ್ನುಡಿ ನೀನು

ಮುಂದಿನ ನನ್ನ ಕನಸುಗಳಿಗೆ

ಹೆಗಲು ಕೊಡುವಳು ನೀನು

ಜಿನುಗುತ್ತಿದೆ ನನ್ನ ಈ ಮನ

ಹೃದಯ ಸಮುದ್ರದಲ್ಲಿ

ನಿನ್ನದೆ ಅಲೆಗಳು

ನೀನ ಪ್ರೀತಿಯ ಅಲೆಗಳಿಗೆ

ಕೊಚ್ಚಿ ಹೋಗಿದೆ ನನ್ನ ಈ ಮನ

ಒಂದು ಸಾರಿ ಬಂದು ಬಿಡು ಬಳಿಗೆ

ಅದೇ ನನ್ನ ನಾ ಮರೆವ ಘಳಿಗೆ 

ನೀನೇ ನನ್ನ ಪ್ರೇಯಸಿ. 

#ಸತೀಶಬಾರಿ

ಧರ್ಮಾಂಧರು

ಕೆಳಲಾಗದೆ ಧರ್ಮಾಂಧರ
ಬಂದೂಕಿನ ಸದ್ದು
ನೋಡಲಾಗದೆ ಅಮಾಯಕರ
ಹೆಣದ ರಾಶಿಗಳು
ನಾನು ನನ್ನದು ಎಂದವರು
ಯಾರು ಉಳಿದಿಲ್ಲ
ದೇವರು ಬಂದು ಕಾಪಾಡಲಿಲ್ಲ ||

                    ಧರ್ಮಾಂಧತೆಯ ಅಫೀಮನ್ನು
                    ಸೇದುವ ಮತಾಂಧರು
                   ಅದರ ಹೊಗೆಗೆ ಸಾಯುತ್ತಿರುವವರು
                   ಅಮಾಯಕರು||

ದೇವಮಾನವರೆಂದು ಅಮಾಯಕರನ್ನು
ಮೋಸ ಮಾಡುತ್ತಿರುವಿರಿ
ಸ್ವರ್ಗದ ಸುಖಕ್ಕಾಗಿ ಇನ್ನೊಬ್ಬರ
ಕೊಲ್ಲುವಿರಿ
ಮೇಲು-ಕೀಳು ಎಂಬ ಕೊಚ್ಚೆಯಲ್ಲಿ
ಬಾಳುತ್ತಿರುವಿರಿ||
   
                  ಧರ್ಮಾಂದರೆ ಒಮ್ಮೆ ಹಿಂದಿರುಗಿ
                  ನೋಡಿ
                  ನೀವು ಯಾರನ್ನೂ ಸಾಯಿಸಿದ್ದಿರಿ ಎಂದು
                  ನಿಮ್ಮ ತಂದೆತಾಯಿ ಹಾಗೆ ಇರುವ
                  ಇನ್ನೂಬ್ಬರ ತಂದೆತಾಯಿರನ್ನು
                  ನಿಮ್ಮ ಸಹೋದರ-ಸಹೋದರಿಯರ
                 ಹಾಗೆ ಇರುವ
                 ಇನ್ನೊಬ್ಬರ ಸಹೋದರ.    ಸಹೋದರಿಯರನ್ನ  ||

ಸಾಕು ಮಾಡಿ ಧರ್ಮಾಂಧತೆಯ
ಕುಚ್ಛೆಸ್ಟೆಗಳನ್ನು
ನಿಮ್ಮ ಧರ್ಮಾಂಧತೆಯ ಫಲವನ್ನು
ನೋಡಲು ನಿಮ್ಮ ನಿಮ್ಮ
ದೇವರಿಗು ಭಯವಾಗುತ್ತಿರಬಹುದು
ಮನುಷ್ಯರನ್ನು ಮನುಷ್ಯರ ಹಾಗೆ
ಪ್ರೀತಿಸಿ |||…

#ಸತೀಶಬಾರಿ

ಜೀವನ ಎಂಬ ಜಾತ್ರೆ

ಸಹೋದರ ನಿಲ್ಲದಿರಲಿ ನಿನ್ನ
ಕಾಯಕದ ಜಾತ್ರೆ
ಜಾತ್ರೆ ಎಂಬ ಜೀವನದಲ್ಲಿ
ನಿನ್ನ ತೇರು ಎಳೆಯುವವನ್ನು ನೀನೆ
ನಿನ್ನ ನಗುವೇ ಜಾತ್ರೆಗೆ ಅಲಂಕಾರ
ನಿನ್ನ ಆತ್ಮವಿಶ್ವಾಸವೇ ಜಾತ್ರೆಯ ಮೆರುಗು||
  
                 ಸಹೋದರ ನಿಲ್ಲದಿರಲಿ ನಿನ್ನ
                 ಕಾಯಕದ ಜಾತ್ರೆ
                ಅಲ್ಲಿ ಒಳ್ಳೆಯವರುಂಟು ಕೆಟ್ಟವರುಂಟು
               ನಿನಗಾಗಿ ಬದುಕುವ ಜನರುಂಟು
               ನಿನಗಾಗಿ ನಿನ್ನವರಿಗಾಗಿ ಸಾಗಲಿ ಜಾತ್ರೆ||

ಅಡ್ಡಬಂದವರಿಗೆ ಒದೆಯಬೇಡ
ಹೆದರಿಸಲು ಬಂದವರಿಗೆ ಹೆದರಬೇಡ
ಕೆಟ್ಟವರಬಗ್ಗೆ ಚಿಂತೆ ಮಾಡಬೇಡ
ಬಡಿದಾಡುವವರು ಬಡಿದಾಡಿಕೊಳ್ಳಲಿ
ಹಿಯ್ಯಾಳಿಸುತ್ತಿರುವ ಜನ
ಹಿಯ್ಯಾಳಿಸುತ್ತಲೆ ಇರಲಿ
ಸಹೋದರ ನಿಲ್ಲದಿರಲಿ ನಿನ್ನ
ಕಾಯಕದ ಜಾತ್ರೆ |||…

#ಸತೀಶಬಾರಿ

Monday, January 11, 2016

ಮನೆಗೆ ಮಾರಿ, ಊರಿಗೆ ಉಪಕಾರಿ

ಮನೆಗೆ ಮಾರಿ, ಊರಿಗೆ ಉಪಕಾರಿ

ಇಲ್ಲಿ ಊರಿಗೆ ಉಪಕಾರಿ ದೇಶ ಕಾಯುವ ಸೈನಿಕ
ಹಗಲು ರಾತ್ರಿ, ಮಳೆ-ಚಳಿ-ಬಿಸಿಲು, ಕಷ್ಟ-ಸುಖ ಎನ್ನದೇ ಪ್ರತಿ ಕ್ಷಣವು ಮೈತುಂಬ ಕಣ್ಣಾಗಿ ದೇಶ ಕಾಯುವ ಸೈನಿಕ ದೇಶಕ್ಕೆ ಉಪಕಾರಿ ಅಲ್ಲವೇ.

ಇನ್ನೂ ಮನೆಗೆ ಮಾರಿ: ದೇಶದಲ್ಲಿ ಹಲವಾರು ಜನರಿದ್ದಾರೆ ತಮ್ಮ ಜಾತಿ ಧರ್ಮದ ಮೇಲೆತೊರಿಸುವ ಕನಿಷ್ಟ ಗೌರವ ದೇಶದ ಮೇಲೆ ಇಲ್ಲ, ಸೈನಿಕ ಅಷ್ಟೇಲ್ಲ ಕಷ್ಟಪಟ್ಟು ದೇಶ ಸುರಕ್ಷಿತವಾಗಿ ನೋಡಿಕೊಂಡರೆ ಅದರೆ ಅರಿವು ಇಲ್ಲದ ಜನರಿದ್ದಾರೆ, "ಸೈನಿಕರು ದೇಶ ಪ್ರೇಮ ಹೆಸರಲ್ಲಿ ದೇಶವನ್ನು ಒಗ್ಗೂಡಿಸಿದರೆ" , ಜಾತಿ ಧರ್ಮದ ಹೆಸರಿನಲ್ಲಿ ದೇಶವನ್ನು ಇಬ್ಭಾಗಿಸುವ ರಾಜಕಾರಣಿಗಳು ಮತ್ತು ಜನರಿದ್ದಾರೆ.

"ಸೈನಿಕರು ಸುರಕ್ಷಿತವಾಗದ್ದರೆ ದೇಶವೂ ಸುರಕ್ಷಿತವಾಗಿರಲಿದೆ".

#ಜೈಜವಾನಜೈಕಿಸಾನ

#ಸತೀಶಬಾರಿ

ನನ್ನ ಸಾಹುಕಾರತಿ

ನಾ ಬರೆದ  ಪ್ರೇಮದ ಸಾಲುಗಳು ನಿನಗಾಗಿ

ಪ್ರತಿ ಸಾಲಿನಲ್ಲಿ ಇತ್ತು ನಿನ್ನದೆ ಛಾಯೆ

ಪದದಲ್ಲಿ ಕಾಣಿಸುತ್ತಿತ್ತು ನಿನ್ನದೆ ಮಧುರತೆ

ನಿನ್ನ ಹೆಜ್ಜೆ ಸಪ್ಪಳ ಕೇಳಿ

ಮೌನ ಮಾತಾಗಿ ಸ್ನೇಹ ಪ್ರೀತಿಯಾಗಿ

ನೀ ನನ್ನ ಬಳಿ ಇರಲು

ಪ್ರತಿ ಘಳಿಗೆಯು ಒಲವಿನ ಉಡುಗೊರೆ

ನೀ ನನ್ನ ಮನದಾಳದ ಮಾತಗಿ

ಸೋಲು ಗೆಲುವಾಗಿ

ನನ್ನನ್ನೇ ಆವರಿಸಿದೆ ನೀ ಸಾಹುಕಾರತಿ

#ಸತೀಶಬಾರಿ

ಅಮ್ಮ

ನನ್ನ ನಲಿವಿನಲ್ಲಿ

ತನ್ನ ನೋವು ಮರೆತವಳು

ನನ್ನ ಬರಿದಾದ ಬದುಕನ್ನು

ಬಂಗಾರ ಮಾಡಿದವಳು

ನನ್ನ ಹೊಟ್ಟೆ ತುಂಬಿಸಿ

ತಾನು ಉಪವಾಸ ಇದ್ದವಳು

ಅವಳು ನನ್ನ "ಅಮ್ಮ".

#ಸತೀಶಬಾರಿ

ಜೀವನದ ದಾರಿ ಇಷ್ಟೇ

ಮುಖದಲ್ಲಿ ನಗು

ಮನಸ್ಸಿನಲ್ಲಿ ಅಳು

ಕಷ್ಟಪಟ್ಟು ದುಡಿಯುವುದು

ಸುಖವಾಗಿ ಜೀವನ ಸಾಗಿಸುವುದು

#ಸತೀಶಬಾರಿ

ತೊಲಗಲಿ ಧರ್ಮಾಂದ ದುಷ್ಟರು

ತೊಲಗಲಿ ಧರ್ಮಾಂದ ದುಷ್ಟರು

ನಗು ನಗುತ್ತಿರಲಿ ಒಳ್ಳೆಯ ಮನಸ್ಸುಗಳು

ಸಾಕಾರವಾಗಲಿ ಚಂದದ ಕನಸುಗಳು

#ಸತೀಶಬಾರಿ

ಬದಲಾದೆ ನಾನು ಆದರೆ ಅವರು

ಬದಲಾಯಿತು ನನ್ನ ಲೋಕ

ಕಾಲಾಕಸವಾಗಿ ಕಂಡರು
ಆದರೆ, ಒಂದು ವ್ಯಕ್ತಿತ್ವವಾಗಿ ನಿಂತಿರುವೆ

ಕೈಲಾಗದವನು ಎಂದರು
ಆದರೆ, ಕೈತುಂಬ ಕೆಲಸ ಮಾಡುತ್ತಿರುವೆ

ಬೇಡುವವನಾಗುತ್ತಾನೆ ಎಂದುಕೊಂಡರು
ಆದರೆ, ನೀಡುವವನಾದೆ

ಶತ್ರುವಂತೆ ನೋಡುತಿರುವರು
ಆದರೆ, ಅವರನ್ನು ಮಿತ್ರರಂತೆ ನೋಡುತ್ತಿರುವೆ

ಅಂದವರಿಗೆ ಕೆಲಸದಿಂದ ಉತ್ತರಿಸಿದೆ
ಆದರೆ, ಅವರು ನನ್ನ ಆಕ್ಷೇಪಣೆ ಮಾಡುತ್ತಾ ಸಮಯ ವ್ಯರ್ಥ ಮಾಡುತ್ತಿರುವರು

ಬದಲಾಯಿತು ನನ್ನ ಲೋಕ
ಆದರೆ, ಅವರು ಬದಲಾಗುತ್ತಿಲ್ಲ.

#ಸತೀಶಬಾರಿ

ನನ್ನವಳು

ನಾನು ಹೇಳುತ್ತಿದ್ದೆ ಅವಳಿಗೆ :

ಒಬ್ಬಂಟಿಯಾಗಿದ್ದ ಬದುಕಿನಲ್ಲಿ ನೀ ಜೊತೆಯಾದೆ

ಕೆಂಡದಂತ್ತಿದ್ದ ಬದುಕನ್ನು ತಂಪಾಗಿಸಿದೆ

ನಿನ್ನಲ್ಲಿ ನನ್ನನ್ನೇ ನಾ ಕಂಡೆ ಎಂದು

ಅವಳು ನನಗೆ :

ಅದಿರಲಿ

 ನಾ ಹೋಗುವ ದಾರೀಲಿ ನೀ ಯಾಕೆ ಬಂದೆ ಎನ್ನಬೇಕೆ? 😭 😭

#ಸತೀಶಬಾರಿ

ಕಾಯಕವಿಲ್ಲದ ಬದುಕು ಯಾತಕ್ಕೆ

ಹಿಂದಿನದು ನೋಡಿದವರು ಯಾರೋ
ಮುಂದಿನದು ನೋಡುವವರು ಯಾರೋ
ನಾವು ನೋಡುತ್ತಿರುವ ಈ ದಿನವೇ ಕೈಲಾಸ|

ಇರುವ ಲೋಕವ ಬಿಟ್ಟು
ಪರಲೋಕಕ್ಕೆ ಆಸೆಪಡುವುದು ಯಾಕೆ

ಎಲ್ಲೋ ಇರುವ ಸ್ವರ್ಗಕ್ಕೆ ಬಡಿದಾಡುತ್ತಿರುವೆ
ಇರುವ ಸ್ಥಳವ ನರಕ ಮಾಡುತಿರುವೆ ಯಾಕೆ
ಜನ್ಮಕೊಟ್ಟ ದೇಶವೇ ಸ್ವರ್ಗ ಅಲ್ಲವೇ.

ಕಾಯಕ ಬಿಟ್ಟು ಕೈಲಾಗದವನಾದೆ
ಪ್ರೀತಿಸುವುದು ಬಿಟ್ಟು ದ್ವೇಷಿಸುವವನಾದೆ ಯಾಕೆ

ಎಲ್ಲವನ್ನೂ ಬಿಟ್ಟು ಒಮ್ಮೆ ಯೋಚಿಸು
ನೀ ನಂಬಿರುವ ದೇವರು ಕಾಯಕ ಮಾಡುತ್ತಿರುವ || .

#ಸತೀಶಬಾರಿ