Monday, January 11, 2016

ಬದಲಾದೆ ನಾನು ಆದರೆ ಅವರು

ಬದಲಾಯಿತು ನನ್ನ ಲೋಕ

ಕಾಲಾಕಸವಾಗಿ ಕಂಡರು
ಆದರೆ, ಒಂದು ವ್ಯಕ್ತಿತ್ವವಾಗಿ ನಿಂತಿರುವೆ

ಕೈಲಾಗದವನು ಎಂದರು
ಆದರೆ, ಕೈತುಂಬ ಕೆಲಸ ಮಾಡುತ್ತಿರುವೆ

ಬೇಡುವವನಾಗುತ್ತಾನೆ ಎಂದುಕೊಂಡರು
ಆದರೆ, ನೀಡುವವನಾದೆ

ಶತ್ರುವಂತೆ ನೋಡುತಿರುವರು
ಆದರೆ, ಅವರನ್ನು ಮಿತ್ರರಂತೆ ನೋಡುತ್ತಿರುವೆ

ಅಂದವರಿಗೆ ಕೆಲಸದಿಂದ ಉತ್ತರಿಸಿದೆ
ಆದರೆ, ಅವರು ನನ್ನ ಆಕ್ಷೇಪಣೆ ಮಾಡುತ್ತಾ ಸಮಯ ವ್ಯರ್ಥ ಮಾಡುತ್ತಿರುವರು

ಬದಲಾಯಿತು ನನ್ನ ಲೋಕ
ಆದರೆ, ಅವರು ಬದಲಾಗುತ್ತಿಲ್ಲ.

#ಸತೀಶಬಾರಿ

No comments:

Post a Comment