Thursday, January 14, 2016

ನನ್ನ ವಿವೇಕಾನಂದರು

ಅವಿವೇಕಿಯಾಗಿದ್ದವನನ್ನು
ವಿವೇಕನ್ನಾಗಿ ಮಾಡಿದರು

ಅಜ್ಞಾನಿಯಾಗಿದ್ದವನನ್ನು
ಜ್ಞಾನಿಯನ್ನಾಗಿ ಮಾಡಿದರು

ಎತ್ತಲೋ ಸಾಗಿದ ಜೀವನವನ್ನು
ಸನ್ಮಾರ್ಗದ ಹಾದಿಯಲ್ಲಿ ಸಾಗಿಸಿದರು

ಕಲ್ಮಶಗಳನ್ನು ತುಂಬಿಕೊಂಡಿದ್ದ ಮನವನ್ನು
ನಿಷ್ಕಲ್ಮಶ ಮನವನ್ನಾಗಿಸಿದ್ದರು

ನನ್ನ ಗುರುಗಳಾದವರು
ನನ್ನ ಬದುಕಿನ ದಾರಿದೀಪವಾದವರು

ಅವರೇ ನನ್ನ

           "ಸ್ವಾಮಿ ವಿವೇಕಾನಂದರು"

#ಸತೀಶಬಾರಿ

No comments:

Post a Comment