Thursday, January 14, 2016

ಧರ್ಮಾಂಧರು

ಕೆಳಲಾಗದೆ ಧರ್ಮಾಂಧರ
ಬಂದೂಕಿನ ಸದ್ದು
ನೋಡಲಾಗದೆ ಅಮಾಯಕರ
ಹೆಣದ ರಾಶಿಗಳು
ನಾನು ನನ್ನದು ಎಂದವರು
ಯಾರು ಉಳಿದಿಲ್ಲ
ದೇವರು ಬಂದು ಕಾಪಾಡಲಿಲ್ಲ ||

                    ಧರ್ಮಾಂಧತೆಯ ಅಫೀಮನ್ನು
                    ಸೇದುವ ಮತಾಂಧರು
                   ಅದರ ಹೊಗೆಗೆ ಸಾಯುತ್ತಿರುವವರು
                   ಅಮಾಯಕರು||

ದೇವಮಾನವರೆಂದು ಅಮಾಯಕರನ್ನು
ಮೋಸ ಮಾಡುತ್ತಿರುವಿರಿ
ಸ್ವರ್ಗದ ಸುಖಕ್ಕಾಗಿ ಇನ್ನೊಬ್ಬರ
ಕೊಲ್ಲುವಿರಿ
ಮೇಲು-ಕೀಳು ಎಂಬ ಕೊಚ್ಚೆಯಲ್ಲಿ
ಬಾಳುತ್ತಿರುವಿರಿ||
   
                  ಧರ್ಮಾಂದರೆ ಒಮ್ಮೆ ಹಿಂದಿರುಗಿ
                  ನೋಡಿ
                  ನೀವು ಯಾರನ್ನೂ ಸಾಯಿಸಿದ್ದಿರಿ ಎಂದು
                  ನಿಮ್ಮ ತಂದೆತಾಯಿ ಹಾಗೆ ಇರುವ
                  ಇನ್ನೂಬ್ಬರ ತಂದೆತಾಯಿರನ್ನು
                  ನಿಮ್ಮ ಸಹೋದರ-ಸಹೋದರಿಯರ
                 ಹಾಗೆ ಇರುವ
                 ಇನ್ನೊಬ್ಬರ ಸಹೋದರ.    ಸಹೋದರಿಯರನ್ನ  ||

ಸಾಕು ಮಾಡಿ ಧರ್ಮಾಂಧತೆಯ
ಕುಚ್ಛೆಸ್ಟೆಗಳನ್ನು
ನಿಮ್ಮ ಧರ್ಮಾಂಧತೆಯ ಫಲವನ್ನು
ನೋಡಲು ನಿಮ್ಮ ನಿಮ್ಮ
ದೇವರಿಗು ಭಯವಾಗುತ್ತಿರಬಹುದು
ಮನುಷ್ಯರನ್ನು ಮನುಷ್ಯರ ಹಾಗೆ
ಪ್ರೀತಿಸಿ |||…

#ಸತೀಶಬಾರಿ

No comments:

Post a Comment