Saturday, January 16, 2016

ಜಾತಿ ರಾಜಕಾರಣಿಗಳು ಇವರು ಜಾತಿ ರಾಜಕಾರಣಿಗಳು

ಜಾತಿ ರಾಜಕಾರಣಿಗಳು ಇವರು ಜಾತಿ ರಾಜಕಾರಣಿಗಳು .

ಚುನಾವಣೆ ಬಂದಾಗ ಮರೆಯದೆ
ಬರುವರು ಆಮೇಲೆ
ಅಣ್ಣ ನಿನ್ನನೇ ಮರೆಯುವರು
ನೋಟು ತೋರಿಸುವರೊ
ಅಣ್ಣ ಆಮೇಲೆ
ನಿನ್ನನೇ ಲೂಟಿಮಾಡುವರೊ||

ಜಾತಿ ರಾಜಕಾರಣಿಗಳು ಇವರು ಜಾತಿ ರಾಜಕಾರಣಿಗಳು

ದೊಡ್ಡ ದೊಡ್ಡ ಭಾಷಣ ಮಾಡುವರೊ
ಅಣ್ಣ ಆಮೇಲೆ
ನಿನ್ನ ಮಾತು ಕೆಳದವರೊ
ಚುನಾವಣೆಯಲ್ಲಿ ಬರೀ
ಆಶ್ವಾಸನೆ ಕೊಡುವರೊ
ಅಣ್ಣ ಆಮೇಲೆ ನಿನ್ನ
ವಾಸನೆಯು ನೋಡದವರೊ||

ಜಾತಿ ರಾಜಕಾರಣಿಗಳು ಇವರು ಜಾತಿ ರಾಜಕಾರಣಿಗಳು 

ಎಲ್ಲರಿಗೂ ನಾಯಕರಾಗಬೇಕಾದವರೊ
ಅಣ್ಣ ಇವರು ಜಾತಿಗೆ ನಾಯಕರಾದವರೊ
ಸಮಾಜಕ್ಕೆ ದುಡಿಯಬೇಕಾದವರೊ
ಅಣ್ಣ ಇವರು ತಮ್ಮ ಮನೆಗೆ
ತುಂಬುತ್ತಿರುವರೊ||

ಜಾತಿ ರಾಜಕಾರಣಿಗಳು ಇವರು ಜಾತಿ ರಾಜಕಾರಣಿಗಳು

ಜಗಳಕ್ಕೆ ಬೇರೆಯವರ ಮಕ್ಕಳನ್ನು
ಎಳೆದು ತರುವರೊ ಇವರು
ಅಣ್ಣ
ತಮ್ಮ ಮಕ್ಕಳನ್ನು
ಮನೆಯಲ್ಲಿಯೇ ಜೋಪಾನ ಮಾಡುವರೊ
ಜಾತಿಯ ಹೆಸರಲ್ಲಿ ರಾಜಕೀಯ
ಮಾಡುವರೊ ಅಣ್ಣ
ಸಮಾಜವನ್ನು ಅಂಧಕಾರದಲ್ಲಿ
ತಳ್ಳುವರೊ||

ಜಾತಿ ರಾಜಕಾರಣಿಗಳು ಇವರು ಜಾತಿ ರಾಜಕಾರಣಿಗಳು.

#ಸತೀಶಬಾರಿ

(ವಿ.ಸೂ. ಈ ಲೇಖನವು ವ್ಯಕ್ತಿಗತ ಯಾರ ವಿರುದ್ಧವೂ ಅಲ್ಲ ಮತ್ತು ಯಾರನ್ನು ನೋವು ಮಾಡಲಿಕ್ಕೆ ಅಲ್ಲ )

No comments:

Post a Comment