ಧರ್ಮಾಂಧರ ಬಾವಿಯಲ್ಲಿ
________________________
ಧರ್ಮಾಂಧರ ಬಾವಿ ಇದು
ಮನುಜ ನೀನಿಲ್ಲಿರಲು
ಮನುಷ್ಯನಾಗಿ ಯೋಗ್ಯನಲ್ಲ
ಇದು ಬಾವಿಯಲ್ಲವೊ
ಮೇಲು/ಕೀಳಿನ ಕೊಚ್ಚೆ
ನಿನಗಿಲ್ಲಿ ಈಜಲು ಬರುವುದಿಲ್ಲ
ಧರ್ಮಾಂಧ ಬಾವಿ ಇದು
ದುಷ್ಟರ ಕೊಂಪೆ ಇದು
ಮನುಷ್ಯತ್ವಕ್ಕೆ ಬೆಲೆಯಿಲ್ಲವೊ
ಅದರಲ್ಲಿರುವುದು ನೀರಲ್ಲವೊ ಮೂಢ
ಮತಾಂಧವೆಂಬ ವಿಷ
ಅದಕ್ಕೆ ಅಂಟಿಕೊಳ್ಳಬೇಡವೊ
ಅದನ್ನು ಕುಡಿಯಲು ಬೇಡವೋ
ರಾಕ್ಷಸರ ಬಾವಿ ಇದು
ನೀ ಇಣುಕಲು ಬೇಡವೋ
ದೂರ ಹೋಗಿ ಬಿಡು
ಮನುಷ್ಯನಾಗಿ ಬದುಕು
ಪ್ರೀತಿಸು ಎಲ್ಲರನ್ನೂ ಗೆಲ್ಲು
ಧರ್ಮಾಂಧರ ಬಾವಿ ಇದು
#ಸತೀಶಬಾರಿ
No comments:
Post a Comment