Monday, January 11, 2016

ಕಾಯಕವಿಲ್ಲದ ಬದುಕು ಯಾತಕ್ಕೆ

ಹಿಂದಿನದು ನೋಡಿದವರು ಯಾರೋ
ಮುಂದಿನದು ನೋಡುವವರು ಯಾರೋ
ನಾವು ನೋಡುತ್ತಿರುವ ಈ ದಿನವೇ ಕೈಲಾಸ|

ಇರುವ ಲೋಕವ ಬಿಟ್ಟು
ಪರಲೋಕಕ್ಕೆ ಆಸೆಪಡುವುದು ಯಾಕೆ

ಎಲ್ಲೋ ಇರುವ ಸ್ವರ್ಗಕ್ಕೆ ಬಡಿದಾಡುತ್ತಿರುವೆ
ಇರುವ ಸ್ಥಳವ ನರಕ ಮಾಡುತಿರುವೆ ಯಾಕೆ
ಜನ್ಮಕೊಟ್ಟ ದೇಶವೇ ಸ್ವರ್ಗ ಅಲ್ಲವೇ.

ಕಾಯಕ ಬಿಟ್ಟು ಕೈಲಾಗದವನಾದೆ
ಪ್ರೀತಿಸುವುದು ಬಿಟ್ಟು ದ್ವೇಷಿಸುವವನಾದೆ ಯಾಕೆ

ಎಲ್ಲವನ್ನೂ ಬಿಟ್ಟು ಒಮ್ಮೆ ಯೋಚಿಸು
ನೀ ನಂಬಿರುವ ದೇವರು ಕಾಯಕ ಮಾಡುತ್ತಿರುವ || .

#ಸತೀಶಬಾರಿ

No comments:

Post a Comment