ಹುಟ್ಟುವ ಮುನ್ನವೇ
ಭ್ರೂಣ ಹತ್ಯಯಾದ
ಕಂದಮ್ಮಗಳೆಷ್ಟೊ
ಬೆಳೆದ ಬೆಳೆ ಕೈಗೆ
ಬರುವ ಮುನ್ನವೇ
ಸಾಲಕ್ಕೆ ಸತ್ತ ರೈತರೆಷ್ಟೊ
ಸಂಸಾರ ಜವಾಬ್ದಾರಿ
ಹೊರುವ ಮುನ್ನವೇ
ವರದಕ್ಷಿಣೆ ಕಿರುಕುಳಕ್ಕೆ
ಹತ್ಯಯಾದ ಸಹೋದರಿಯರೆಷ್ಟೊ
ಉದ್ಯೋಗ ಸಿಗುವ
ಮುನ್ನವೇ ನಿರುದ್ಯೋಗಿಗಳಾಗಿ
ಸತ್ತ ವಿದ್ಯಾವಂತರೆಷ್ಟೊ
ಸಾಕು ಮಾಡೋಣ
ಸಮಸ್ಯೆಗಳ ಲೆಕ್ಕ
ಹಾಕುವುದನ್ನು
ನಿಲ್ಲಿಸಬೇಕಿದೆ ಅನ್ಯಾಯದ
ಆರ್ಭಟ
ಹೋರಾಡಬೇಕಿದೆ ಸಮಸ್ಯೆಗಳ
ವಿರುದ್ಧ
#ಸತೀಶಬಾರಿ
No comments:
Post a Comment