Thursday, January 14, 2016

ಜೀವನ ಎಂಬ ಜಾತ್ರೆ

ಸಹೋದರ ನಿಲ್ಲದಿರಲಿ ನಿನ್ನ
ಕಾಯಕದ ಜಾತ್ರೆ
ಜಾತ್ರೆ ಎಂಬ ಜೀವನದಲ್ಲಿ
ನಿನ್ನ ತೇರು ಎಳೆಯುವವನ್ನು ನೀನೆ
ನಿನ್ನ ನಗುವೇ ಜಾತ್ರೆಗೆ ಅಲಂಕಾರ
ನಿನ್ನ ಆತ್ಮವಿಶ್ವಾಸವೇ ಜಾತ್ರೆಯ ಮೆರುಗು||
  
                 ಸಹೋದರ ನಿಲ್ಲದಿರಲಿ ನಿನ್ನ
                 ಕಾಯಕದ ಜಾತ್ರೆ
                ಅಲ್ಲಿ ಒಳ್ಳೆಯವರುಂಟು ಕೆಟ್ಟವರುಂಟು
               ನಿನಗಾಗಿ ಬದುಕುವ ಜನರುಂಟು
               ನಿನಗಾಗಿ ನಿನ್ನವರಿಗಾಗಿ ಸಾಗಲಿ ಜಾತ್ರೆ||

ಅಡ್ಡಬಂದವರಿಗೆ ಒದೆಯಬೇಡ
ಹೆದರಿಸಲು ಬಂದವರಿಗೆ ಹೆದರಬೇಡ
ಕೆಟ್ಟವರಬಗ್ಗೆ ಚಿಂತೆ ಮಾಡಬೇಡ
ಬಡಿದಾಡುವವರು ಬಡಿದಾಡಿಕೊಳ್ಳಲಿ
ಹಿಯ್ಯಾಳಿಸುತ್ತಿರುವ ಜನ
ಹಿಯ್ಯಾಳಿಸುತ್ತಲೆ ಇರಲಿ
ಸಹೋದರ ನಿಲ್ಲದಿರಲಿ ನಿನ್ನ
ಕಾಯಕದ ಜಾತ್ರೆ |||…

#ಸತೀಶಬಾರಿ

No comments:

Post a Comment