ಒಡಲಾಳದ ನೋವು
ತಿಳಿಯದು ಯಾರಿಗೂ
ಜಗತ್ತೇ ಹೊರಗೊಂದು
ಒಳಗೊಂದು ಬದುಕುತ್ತಿರುವಾಗ
ನನ್ನ ನೋವು ಅರಿವರಾರು..? ||
ಇಲ್ಲಿ ಭಾವನೆಗಳಿಗೆ ಬೆಲೆಯಿಲ್ಲ
ನಾಟಕವೇ ಎಲ್ಲಾ
ಸಂಬಂಧಗಳು ಹಳಸುತ್ತಿರುವಾಗ
ಹೊನ್ನಿಗಾಗಿ ಮಣ್ಣಿಗಾಗಿ
ಬಡಿದಾಡುವವರೇ ಎಲ್ಲಾ ||
ಎಲ್ಲಿ ಹುಡುಕಲಿ ಸ್ವಚ್ಛ ಬದುಕು
ಕಾಣದಾಗಿದೆ ಉತ್ತಮ ಸಮಾಜ
ಹುಡುಕುತ್ತಿರುವೆ ವಿಶ್ವಮಾನವನ ಸಮೂಹ.
#ಸತೀಶಬಾರಿ
No comments:
Post a Comment