ನಿನ್ನ ಹೃದಯದ
ಬಾಗಿಲಿಗೆ ಬಂದಿರುವೆ
ಒಳ ಬರಲು ಅಪ್ಪಣೆಯೇ
ಗೆಳತಿ ||
ಪ್ರೀತಿ ಕನಸು
ಹೊತ್ತು ಬಂದಿರುವೆ
ನಿನ್ನ ಒಲವ
ಬಯಸಿ ನಿಂತಿರುವೆ
ಜೊತೆಯಿರಲು
ಅಪ್ಪಣೆಯೇ ಗೆಳತಿ||
ಇಳಿಸಂಜೆಯ ತಂಗಾಳಿಯು
ನಮ್ಮಿಬ್ಬರಿಗಾಗಿಯೇ ಬೀಸಿದ
ನಿನ್ನ ಕೈಹಿಡಿದು
ನಡೆವ ಬಯಸಿರುವೆ
ಬಂದು ಬಿಡು ಒಂದು ಸಾರಿ
ಹೆಜ್ಜೆ ಇಡು ನನ್ನ
ಭಾವನೆಗಳ ಲೋಕಕ್ಕೆ ಗೆಳತಿ ||
#ಸತೀಶಬಾರಿ
No comments:
Post a Comment