Tuesday, June 28, 2016

ನನ್ನಾಕೆ

ನನ್ನವಳ ನೋಟಕ್ಕೆ
ಮೇಘರಾಜನು ಕರಗಿ 
ಭೂಮಿಗೆ ಬರುವ

ಅವಳು ಬರುವ ದಾರಿಲಿ
ಗಿಡಮರಗಳಿಗೂ ಬಿಸಣಿಕೆಯಾಗಿ
ಬಿಸುವ ಆಸೆ

ನನ್ನವಳು ಕಂಡರೆ
ಮಿಂಚಿಗು ಅವಸರ
ಅವಳ ಛಾಯಾಚಿತ್ರ
ತೆಗೆಯುತ್ತದೆ ಸರಸರ 

ಅಮಾವಾಸ್ಯೆಯ ಕತ್ತಲೆಯಲ್ಲಿ
ನನಗೆ ನನ್ನವಳೆ ಹುಣ್ಣಿಮೆಯ
ಚಂದಿರನ ಬೆಳಕು

ನನ್ನವಳ ನೋಡಲು
ಸೂರ್ಯ ಚಂದ್ರರಿಗೂ
ನಿತ್ಯವು ಜಗಳ
ಅವನು ಇಲ್ಲದಿದ್ದರೆ ಇವನು ಬರುವ
ಇವನು ಇಲ್ಲದಿದ್ದರೆ ಅವನು ಬರುವ

#ಸತೀಶಬಾರಿ

No comments:

Post a Comment