Tuesday, July 19, 2016

೧)ದೇವರನ್ನೇಕೆ ಹುಡುಕುವಿರಿ.
೨)ಆ ಧರ್ಮ ಈ ಧರ್ಮ ಅಂತೇಕೆ ಬಡಿದಾಡುವಿರಿ.
೩)ಬದುಕಿದ್ದಾಗ ಸಿಗದ ಸ್ವರ್ಗ ಸತ್ತ ಮೇಲೆ ಅನುಭವಿಸಲೇಕೆ ಆಸೆ ಪಡುವಿರಿ.

೧)ದೇವರನ್ನೇಕೆ ಹುಡುಕುವಿರಿ.
--------------------------------------

ಎಲ್ಲಿಯೂ ಕಾಣದ ದೇವರನ್ನೇಕೆ ಹುಡುಕುವಿರಿ, ದೇವರಿರುವನು ನಿಮ್ಮ ನಡುವೆ ಅದು ರೂಪದಲ್ಲಾದರು ಸರಿ, ದೇವರನ್ನು ಕಾಣುವ ಮಾನವೀಯ ಕಣ್ಣೀರಬೇಕು ಅಷ್ಟೇ.

     ದೇವರಿರುವನು ನಿಮ್ಮ ಮಕ್ಕಳ ರೂಪದಲ್ಲಿ, ತಂದೆತಾಯಿಯ ರೂಪದಲ್ಲಿ, ಮಡದಿ ರೂಪದಲ್ಲಿ, ಸಹೋದರ/ಸಹೋದರಿಯ ರೂಪದಲ್ಲಿ, ನಿಮ್ಮ ಸ್ನೇಹಿತರ ರೂಪದಲ್ಲಿ. ಕಷ್ಟದಲ್ಲಿ ನಿಮಗೆ ಸಹಾಯ ಮಾಡುವ ಜನರ ರೂಪದಲ್ಲಿ .

ನಿಮಗೂ ದೇವರಾಗುವ ಬಯಕೆ ಇದ್ದರೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ. ಕಷ್ಟಕಾಲದ ಸಹಾಯವೇ ಅವರಿಗೆ ವರ, ವರ ಕೊಡುವವನು ದೇವರು ಮಾತ್ರ ಅಲ್ಲವೆ.

೨)ಆ ಧರ್ಮ ಈ ಧರ್ಮ ಅಂತೇಕೆ ಬಡಿದಾಡುವಿರಿ.
----------------------------------------------------------------

ಧರ್ಮದ ಹೆಸರಲ್ಲಿ ಜಗತ್ತಿನ ತುಂಬಾ ಅದೆಷ್ಟೋ ಮಾರಣಾಹೋಮ ನಡೆದಿದೆಯೊ ಲೆಕ್ಕವಿಲ್ಲ. ಧರ್ಮದ ಹಣೆಪಟ್ಟಿ ಕಟ್ಟಿಕೊಂಡು ಅಧರ್ಮದ ದಾರಿಯಲ್ಲಿ ನಡೆಯುತ್ತಾ ರಕ್ತದೊಕುಳಿ ನಡೆಸುತ್ತಿರುವರನ್ನು ನೋಡಿದರೆ ಮನಸ್ಸು ಸಂಕಟವಾಗುತ್ತದೆ. ಧರ್ಮದ ಮೂಲ ಆಶಯವನ್ನು ಗಾಳಿಗೆ ತೂರಿದ ಕಟುಕರನ್ನು ಸರಿದಾರಿಗೆ ತರುವರಾರು? .

   ಧರ್ಮದ ವಿಚಾರದಲ್ಲಿ ಬಸವಣ್ಣನವರನ್ನು ನೆನೆಯಲೆಬೇಕು . "ದಯವೇ ಧರ್ಮದ ಮೂಲವಯ್ಯ" ಎಂದು ಒಂದೇ ವಾಕ್ಯದಲ್ಲಿ ಹೇಳಿದ ಮಹಾನ್ ಚೇತನ .

ನಿಜ ಧರ್ಮ ವೆಂದರೆ ದಯೇ , ಪ್ರೀತಿ, ಸ್ನೇಹ. ಜನರು ಪಾಲಿಸು ಪಂಥ ಯಾವುದೇ ಇರಲಿ,  ಸಕಲರನ್ನು ಪ್ರೀತಿಯದಿ , ಸ್ನೇಹದಿ ಕಾಣುವುದೇ ನಿಜವಾದ ಧರ್ಮ ಅದು ವಿಶ್ವಮಾನವನ ಧರ್ಮ .

೩)ಬದುಕಿದ್ದಾಗ ಸಿಗದ ಸ್ವರ್ಗ ಸತ್ತ ಮೇಲೆ ------------------------------------------------- ಅನುಭವಿಸಲೇಕೆ ಆಸೆ ಪಡುವಿರಿ.
---------------------------------------

ಮೇಲಿನ ಎರಡನ್ನೂ ಪಾಲಿಸಿದರೆ ಸ್ವರ್ಗ ನಿಮ್ಮೆದುರೆ ಮನಬಿಚ್ಚಿ ಕೊಳ್ಳಲಿದೆ.

#ಸತೀಶಬಾರಿ

No comments:

Post a Comment