Sunday, January 31, 2016

ಸಮಸ್ಯೆ

ಹುಟ್ಟುವ ಮುನ್ನವೇ
ಭ್ರೂಣ ಹತ್ಯಯಾದ
ಕಂದಮ್ಮಗಳೆಷ್ಟೊ

ಬೆಳೆದ ಬೆಳೆ ಕೈಗೆ
ಬರುವ ಮುನ್ನವೇ
ಸಾಲಕ್ಕೆ ಸತ್ತ ರೈತರೆಷ್ಟೊ

ಸಂಸಾರ ಜವಾಬ್ದಾರಿ
ಹೊರುವ ಮುನ್ನವೇ
ವರದಕ್ಷಿಣೆ ಕಿರುಕುಳಕ್ಕೆ
ಹತ್ಯಯಾದ ಸಹೋದರಿಯರೆಷ್ಟೊ

ಉದ್ಯೋಗ ಸಿಗುವ
ಮುನ್ನವೇ ನಿರುದ್ಯೋಗಿಗಳಾಗಿ
ಸತ್ತ ವಿದ್ಯಾವಂತರೆಷ್ಟೊ

ಸಾಕು ಮಾಡೋಣ
ಸಮಸ್ಯೆಗಳ ಲೆಕ್ಕ
ಹಾಕುವುದನ್ನು

ನಿಲ್ಲಿಸಬೇಕಿದೆ ಅನ್ಯಾಯದ
ಆರ್ಭಟ
ಹೋರಾಡಬೇಕಿದೆ ಸಮಸ್ಯೆಗಳ
ವಿರುದ್ಧ

#ಸತೀಶಬಾರಿ

Wednesday, January 27, 2016

ಭಾವನೆ

ಭಾವನೆ ಬದಲಾಗಿ ಪ್ರೀತಿಗೆ ಸೋತೊಗಿ

Tuesday, January 19, 2016

ಧರ್ಮಾಂಧರ ಬಾವಿ ಇದು

ಧರ್ಮಾಂಧರ ಬಾವಿಯಲ್ಲಿ
________________________

ಧರ್ಮಾಂಧರ ಬಾವಿ ಇದು
ಮನುಜ ನೀನಿಲ್ಲಿರಲು
ಮನುಷ್ಯನಾಗಿ ಯೋಗ್ಯನಲ್ಲ

ಇದು ಬಾವಿಯಲ್ಲವೊ
ಮೇಲು/ಕೀಳಿನ ಕೊಚ್ಚೆ
ನಿನಗಿಲ್ಲಿ ಈಜಲು ಬರುವುದಿಲ್ಲ

ಧರ್ಮಾಂಧ ಬಾವಿ ಇದು
ದುಷ್ಟರ ಕೊಂಪೆ ಇದು
ಮನುಷ್ಯತ್ವಕ್ಕೆ ಬೆಲೆಯಿಲ್ಲವೊ

ಅದರಲ್ಲಿರುವುದು ನೀರಲ್ಲವೊ ಮೂಢ
ಮತಾಂಧವೆಂಬ ವಿಷ
ಅದಕ್ಕೆ ಅಂಟಿಕೊಳ್ಳಬೇಡವೊ
ಅದನ್ನು ಕುಡಿಯಲು ಬೇಡವೋ

ರಾಕ್ಷಸರ ಬಾವಿ ಇದು
ನೀ ಇಣುಕಲು ಬೇಡವೋ

ದೂರ ಹೋಗಿ ಬಿಡು
ಮನುಷ್ಯನಾಗಿ ಬದುಕು
ಪ್ರೀತಿಸು ಎಲ್ಲರನ್ನೂ ಗೆಲ್ಲು

ಧರ್ಮಾಂಧರ ಬಾವಿ ಇದು

#ಸತೀಶಬಾರಿ

Saturday, January 16, 2016

ಜಾತಿ ರಾಜಕಾರಣಿಗಳು ಇವರು ಜಾತಿ ರಾಜಕಾರಣಿಗಳು

ಜಾತಿ ರಾಜಕಾರಣಿಗಳು ಇವರು ಜಾತಿ ರಾಜಕಾರಣಿಗಳು .

ಚುನಾವಣೆ ಬಂದಾಗ ಮರೆಯದೆ
ಬರುವರು ಆಮೇಲೆ
ಅಣ್ಣ ನಿನ್ನನೇ ಮರೆಯುವರು
ನೋಟು ತೋರಿಸುವರೊ
ಅಣ್ಣ ಆಮೇಲೆ
ನಿನ್ನನೇ ಲೂಟಿಮಾಡುವರೊ||

ಜಾತಿ ರಾಜಕಾರಣಿಗಳು ಇವರು ಜಾತಿ ರಾಜಕಾರಣಿಗಳು

ದೊಡ್ಡ ದೊಡ್ಡ ಭಾಷಣ ಮಾಡುವರೊ
ಅಣ್ಣ ಆಮೇಲೆ
ನಿನ್ನ ಮಾತು ಕೆಳದವರೊ
ಚುನಾವಣೆಯಲ್ಲಿ ಬರೀ
ಆಶ್ವಾಸನೆ ಕೊಡುವರೊ
ಅಣ್ಣ ಆಮೇಲೆ ನಿನ್ನ
ವಾಸನೆಯು ನೋಡದವರೊ||

ಜಾತಿ ರಾಜಕಾರಣಿಗಳು ಇವರು ಜಾತಿ ರಾಜಕಾರಣಿಗಳು 

ಎಲ್ಲರಿಗೂ ನಾಯಕರಾಗಬೇಕಾದವರೊ
ಅಣ್ಣ ಇವರು ಜಾತಿಗೆ ನಾಯಕರಾದವರೊ
ಸಮಾಜಕ್ಕೆ ದುಡಿಯಬೇಕಾದವರೊ
ಅಣ್ಣ ಇವರು ತಮ್ಮ ಮನೆಗೆ
ತುಂಬುತ್ತಿರುವರೊ||

ಜಾತಿ ರಾಜಕಾರಣಿಗಳು ಇವರು ಜಾತಿ ರಾಜಕಾರಣಿಗಳು

ಜಗಳಕ್ಕೆ ಬೇರೆಯವರ ಮಕ್ಕಳನ್ನು
ಎಳೆದು ತರುವರೊ ಇವರು
ಅಣ್ಣ
ತಮ್ಮ ಮಕ್ಕಳನ್ನು
ಮನೆಯಲ್ಲಿಯೇ ಜೋಪಾನ ಮಾಡುವರೊ
ಜಾತಿಯ ಹೆಸರಲ್ಲಿ ರಾಜಕೀಯ
ಮಾಡುವರೊ ಅಣ್ಣ
ಸಮಾಜವನ್ನು ಅಂಧಕಾರದಲ್ಲಿ
ತಳ್ಳುವರೊ||

ಜಾತಿ ರಾಜಕಾರಣಿಗಳು ಇವರು ಜಾತಿ ರಾಜಕಾರಣಿಗಳು.

#ಸತೀಶಬಾರಿ

(ವಿ.ಸೂ. ಈ ಲೇಖನವು ವ್ಯಕ್ತಿಗತ ಯಾರ ವಿರುದ್ಧವೂ ಅಲ್ಲ ಮತ್ತು ಯಾರನ್ನು ನೋವು ಮಾಡಲಿಕ್ಕೆ ಅಲ್ಲ )

ಅಂಬೆಯ ಕೂಗು ಇದು ಕತೆಯಲ್ಲ ಗೋವಿನ ವ್ಯಥೆ

ಅಂಬೆಯ ಕೂಗು ಇದು
ಕತೆಯಲ್ಲ ಗೋವಿನ ವ್ಯಥೆ

ಒಬ್ಬರು ಆಹಾರ ಅಂತ ಕೊಲ್ಲುವರು
ಇನ್ನೊಬ್ಬರು ದೇವರು ಅಂತ ಹೇಳಿ
ದೇವರ ಮುಂದೇನೆ ಕೊಲ್ಲುವರು
ಇಬ್ಬರ ನಡುವೆ ರಾಜಕೀಯ
ಮಾಡುತ್ತಿರುವನು ಒಬ್ಬನು||

           ನಿಮ್ಮ ನಿಮ್ಮ ಸ್ವಾರ್ಥಕ್ಕೆ ಗೋವನ್ನು
           ಉಪಯೋಗಿಸುತ್ತಿರುವಿರಿ
          ಗೋವಿನ ಹೆಸರಲ್ಲೇ ರಾಜಕೀಯ
         ಮಾಡುವಿರಿ
           ಎಲ್ಲವೂದಕ್ಕು ಉಪಯೋಗವಾಗುವುದು
           ಗೋವು
           ಯಾವುದಕ್ಕೂ ಉಪಯೋಗವಾಗದವನ್ನು
           ಮನುಜ||

ತನ್ನ ಜೀವನವೀಡಿ ಜಗತ್ತಿಗೇ
ಅನ್ನ ಕೊಡುವವನು ರೈತನಾದರೆ
ತನ್ನ ಜೀವನವಿಡೀ ಜಗತ್ತಿಗೆ
ಹಾಲು ಕೊಡುವುದು ಗೋವು
ರಕ್ಷಿಸಬೇಕಿದೆ ಸ್ಥಳೀಯ
ಗೋವಿನ ಸಂತತಿಯನ್ನು||

ನೆನಪಿರಲಿ ಮನುಜ ನಿನ್ನ ಎಲ್ಲಾ ದುಷ್ಟ ನಡತೆಗಳಿಗೆ
ಮುಂದೆ ಒಂದು ದಿನ ಕುಡಿಯಲು ಒಂದು ಹನಿ ನೀರು ಸಿಗಲಾರದ ಸಮಯ ಬರಬಹುದು ..

#ಸತೀಶಬಾರಿ

ಅಂಬೆಯ ಕೂಗು ಇದು ಕತೆಯಲ್ಲ ಗೋವಿನ ವ್ಯಥೆ

ಅಂಬೆಯ ಕೂಗು ಇದು
ಕತೆಯಲ್ಲ ಗೋವಿನ ವ್ಯಥೆ


ಒಬ್ಬರು ಆಹಾರ ಅಂತ ಕೊಲ್ಲುವರು
ಇನ್ನೊಬ್ಬರು ದೇವರು ಅಂತ ಹೇಳಿ
ದೇವರ ಮುಂದೇನೆ ಕೊಲ್ಲುವರು
ಇಬ್ಬರ ನಡುವೆ ರಾಜಕೀಯ
ಮಾಡುತ್ತಿರುವನು ಒಬ್ಬನು||

           ನಿಮ್ಮ ನಿಮ್ಮ ಸ್ವಾರ್ಥಕ್ಕೆ ಗೋವನ್ನು
           ಉಪಯೋಗಿಸುತ್ತಿರುವಿರಿ
          ಗೋವಿನ ಹೆಸರಲ್ಲೇ ರಾಜಕೀಯ
         ಮಾಡುವಿರಿ
           ಎಲ್ಲವೂದಕ್ಕು ಉಪಯೋಗವಾಗುವುದು
           ಗೋವು
           ಯಾವುದಕ್ಕೂ ಉಪಯೋಗವಾಗದವನ್ನು
           ಮನುಜ||

ತನ್ನ ಜೀವನವೀಡಿ ಜಗತ್ತಿಗೇ
ಅನ್ನ ಕೊಡುವವನು ರೈತನಾದರೆ
ತನ್ನ ಜೀವನವಿಡೀ ಜಗತ್ತಿಗೆ
ಹಾಲು ಕೊಡುವುದು ಗೋವು
ರಕ್ಷಿಸಬೇಕಿದೆ ಸ್ಥಳೀಯ
ಗೋವಿನ ಸಂತತಿಯನ್ನು||

ನೆನಪಿರಲಿ ಮನುಜ ನಿನ್ನ ಎಲ್ಲಾ ದುಷ್ಟ ನಡತೆಗಳಿಗೆ
ಮುಂದೆ ಒಂದು ದಿನ ಕುಡಿಯಲು ಒಂದು ಹನಿ ನೀರು ಸಿಗಲಾರದ ಸಮಯ ಬರಬಹುದು ..

#ಸತೀಶಬಾರಿ

Thursday, January 14, 2016

ನನ್ನ ವಿವೇಕಾನಂದರು

ಅವಿವೇಕಿಯಾಗಿದ್ದವನನ್ನು
ವಿವೇಕನ್ನಾಗಿ ಮಾಡಿದರು

ಅಜ್ಞಾನಿಯಾಗಿದ್ದವನನ್ನು
ಜ್ಞಾನಿಯನ್ನಾಗಿ ಮಾಡಿದರು

ಎತ್ತಲೋ ಸಾಗಿದ ಜೀವನವನ್ನು
ಸನ್ಮಾರ್ಗದ ಹಾದಿಯಲ್ಲಿ ಸಾಗಿಸಿದರು

ಕಲ್ಮಶಗಳನ್ನು ತುಂಬಿಕೊಂಡಿದ್ದ ಮನವನ್ನು
ನಿಷ್ಕಲ್ಮಶ ಮನವನ್ನಾಗಿಸಿದ್ದರು

ನನ್ನ ಗುರುಗಳಾದವರು
ನನ್ನ ಬದುಕಿನ ದಾರಿದೀಪವಾದವರು

ಅವರೇ ನನ್ನ

           "ಸ್ವಾಮಿ ವಿವೇಕಾನಂದರು"

#ಸತೀಶಬಾರಿ

ನಾಳೆಯ ಬದುಕಿನ ಮುನ್ನುಡಿ

ನಾಳೆಯ ಬದುಕಿನ ಮುನ್ನುಡಿ ನೀನು

ಮುಂದಿನ ನನ್ನ ಕನಸುಗಳಿಗೆ

ಹೆಗಲು ಕೊಡುವಳು ನೀನು

ಜಿನುಗುತ್ತಿದೆ ನನ್ನ ಈ ಮನ

ಹೃದಯ ಸಮುದ್ರದಲ್ಲಿ

ನಿನ್ನದೆ ಅಲೆಗಳು

ನೀನ ಪ್ರೀತಿಯ ಅಲೆಗಳಿಗೆ

ಕೊಚ್ಚಿ ಹೋಗಿದೆ ನನ್ನ ಈ ಮನ

ಒಂದು ಸಾರಿ ಬಂದು ಬಿಡು ಬಳಿಗೆ

ಅದೇ ನನ್ನ ನಾ ಮರೆವ ಘಳಿಗೆ 

ನೀನೇ ನನ್ನ ಪ್ರೇಯಸಿ. 

#ಸತೀಶಬಾರಿ

ಧರ್ಮಾಂಧರು

ಕೆಳಲಾಗದೆ ಧರ್ಮಾಂಧರ
ಬಂದೂಕಿನ ಸದ್ದು
ನೋಡಲಾಗದೆ ಅಮಾಯಕರ
ಹೆಣದ ರಾಶಿಗಳು
ನಾನು ನನ್ನದು ಎಂದವರು
ಯಾರು ಉಳಿದಿಲ್ಲ
ದೇವರು ಬಂದು ಕಾಪಾಡಲಿಲ್ಲ ||

                    ಧರ್ಮಾಂಧತೆಯ ಅಫೀಮನ್ನು
                    ಸೇದುವ ಮತಾಂಧರು
                   ಅದರ ಹೊಗೆಗೆ ಸಾಯುತ್ತಿರುವವರು
                   ಅಮಾಯಕರು||

ದೇವಮಾನವರೆಂದು ಅಮಾಯಕರನ್ನು
ಮೋಸ ಮಾಡುತ್ತಿರುವಿರಿ
ಸ್ವರ್ಗದ ಸುಖಕ್ಕಾಗಿ ಇನ್ನೊಬ್ಬರ
ಕೊಲ್ಲುವಿರಿ
ಮೇಲು-ಕೀಳು ಎಂಬ ಕೊಚ್ಚೆಯಲ್ಲಿ
ಬಾಳುತ್ತಿರುವಿರಿ||
   
                  ಧರ್ಮಾಂದರೆ ಒಮ್ಮೆ ಹಿಂದಿರುಗಿ
                  ನೋಡಿ
                  ನೀವು ಯಾರನ್ನೂ ಸಾಯಿಸಿದ್ದಿರಿ ಎಂದು
                  ನಿಮ್ಮ ತಂದೆತಾಯಿ ಹಾಗೆ ಇರುವ
                  ಇನ್ನೂಬ್ಬರ ತಂದೆತಾಯಿರನ್ನು
                  ನಿಮ್ಮ ಸಹೋದರ-ಸಹೋದರಿಯರ
                 ಹಾಗೆ ಇರುವ
                 ಇನ್ನೊಬ್ಬರ ಸಹೋದರ.    ಸಹೋದರಿಯರನ್ನ  ||

ಸಾಕು ಮಾಡಿ ಧರ್ಮಾಂಧತೆಯ
ಕುಚ್ಛೆಸ್ಟೆಗಳನ್ನು
ನಿಮ್ಮ ಧರ್ಮಾಂಧತೆಯ ಫಲವನ್ನು
ನೋಡಲು ನಿಮ್ಮ ನಿಮ್ಮ
ದೇವರಿಗು ಭಯವಾಗುತ್ತಿರಬಹುದು
ಮನುಷ್ಯರನ್ನು ಮನುಷ್ಯರ ಹಾಗೆ
ಪ್ರೀತಿಸಿ |||…

#ಸತೀಶಬಾರಿ

ಜೀವನ ಎಂಬ ಜಾತ್ರೆ

ಸಹೋದರ ನಿಲ್ಲದಿರಲಿ ನಿನ್ನ
ಕಾಯಕದ ಜಾತ್ರೆ
ಜಾತ್ರೆ ಎಂಬ ಜೀವನದಲ್ಲಿ
ನಿನ್ನ ತೇರು ಎಳೆಯುವವನ್ನು ನೀನೆ
ನಿನ್ನ ನಗುವೇ ಜಾತ್ರೆಗೆ ಅಲಂಕಾರ
ನಿನ್ನ ಆತ್ಮವಿಶ್ವಾಸವೇ ಜಾತ್ರೆಯ ಮೆರುಗು||
  
                 ಸಹೋದರ ನಿಲ್ಲದಿರಲಿ ನಿನ್ನ
                 ಕಾಯಕದ ಜಾತ್ರೆ
                ಅಲ್ಲಿ ಒಳ್ಳೆಯವರುಂಟು ಕೆಟ್ಟವರುಂಟು
               ನಿನಗಾಗಿ ಬದುಕುವ ಜನರುಂಟು
               ನಿನಗಾಗಿ ನಿನ್ನವರಿಗಾಗಿ ಸಾಗಲಿ ಜಾತ್ರೆ||

ಅಡ್ಡಬಂದವರಿಗೆ ಒದೆಯಬೇಡ
ಹೆದರಿಸಲು ಬಂದವರಿಗೆ ಹೆದರಬೇಡ
ಕೆಟ್ಟವರಬಗ್ಗೆ ಚಿಂತೆ ಮಾಡಬೇಡ
ಬಡಿದಾಡುವವರು ಬಡಿದಾಡಿಕೊಳ್ಳಲಿ
ಹಿಯ್ಯಾಳಿಸುತ್ತಿರುವ ಜನ
ಹಿಯ್ಯಾಳಿಸುತ್ತಲೆ ಇರಲಿ
ಸಹೋದರ ನಿಲ್ಲದಿರಲಿ ನಿನ್ನ
ಕಾಯಕದ ಜಾತ್ರೆ |||…

#ಸತೀಶಬಾರಿ

Monday, January 11, 2016

ಮನೆಗೆ ಮಾರಿ, ಊರಿಗೆ ಉಪಕಾರಿ

ಮನೆಗೆ ಮಾರಿ, ಊರಿಗೆ ಉಪಕಾರಿ

ಇಲ್ಲಿ ಊರಿಗೆ ಉಪಕಾರಿ ದೇಶ ಕಾಯುವ ಸೈನಿಕ
ಹಗಲು ರಾತ್ರಿ, ಮಳೆ-ಚಳಿ-ಬಿಸಿಲು, ಕಷ್ಟ-ಸುಖ ಎನ್ನದೇ ಪ್ರತಿ ಕ್ಷಣವು ಮೈತುಂಬ ಕಣ್ಣಾಗಿ ದೇಶ ಕಾಯುವ ಸೈನಿಕ ದೇಶಕ್ಕೆ ಉಪಕಾರಿ ಅಲ್ಲವೇ.

ಇನ್ನೂ ಮನೆಗೆ ಮಾರಿ: ದೇಶದಲ್ಲಿ ಹಲವಾರು ಜನರಿದ್ದಾರೆ ತಮ್ಮ ಜಾತಿ ಧರ್ಮದ ಮೇಲೆತೊರಿಸುವ ಕನಿಷ್ಟ ಗೌರವ ದೇಶದ ಮೇಲೆ ಇಲ್ಲ, ಸೈನಿಕ ಅಷ್ಟೇಲ್ಲ ಕಷ್ಟಪಟ್ಟು ದೇಶ ಸುರಕ್ಷಿತವಾಗಿ ನೋಡಿಕೊಂಡರೆ ಅದರೆ ಅರಿವು ಇಲ್ಲದ ಜನರಿದ್ದಾರೆ, "ಸೈನಿಕರು ದೇಶ ಪ್ರೇಮ ಹೆಸರಲ್ಲಿ ದೇಶವನ್ನು ಒಗ್ಗೂಡಿಸಿದರೆ" , ಜಾತಿ ಧರ್ಮದ ಹೆಸರಿನಲ್ಲಿ ದೇಶವನ್ನು ಇಬ್ಭಾಗಿಸುವ ರಾಜಕಾರಣಿಗಳು ಮತ್ತು ಜನರಿದ್ದಾರೆ.

"ಸೈನಿಕರು ಸುರಕ್ಷಿತವಾಗದ್ದರೆ ದೇಶವೂ ಸುರಕ್ಷಿತವಾಗಿರಲಿದೆ".

#ಜೈಜವಾನಜೈಕಿಸಾನ

#ಸತೀಶಬಾರಿ

ನನ್ನ ಸಾಹುಕಾರತಿ

ನಾ ಬರೆದ  ಪ್ರೇಮದ ಸಾಲುಗಳು ನಿನಗಾಗಿ

ಪ್ರತಿ ಸಾಲಿನಲ್ಲಿ ಇತ್ತು ನಿನ್ನದೆ ಛಾಯೆ

ಪದದಲ್ಲಿ ಕಾಣಿಸುತ್ತಿತ್ತು ನಿನ್ನದೆ ಮಧುರತೆ

ನಿನ್ನ ಹೆಜ್ಜೆ ಸಪ್ಪಳ ಕೇಳಿ

ಮೌನ ಮಾತಾಗಿ ಸ್ನೇಹ ಪ್ರೀತಿಯಾಗಿ

ನೀ ನನ್ನ ಬಳಿ ಇರಲು

ಪ್ರತಿ ಘಳಿಗೆಯು ಒಲವಿನ ಉಡುಗೊರೆ

ನೀ ನನ್ನ ಮನದಾಳದ ಮಾತಗಿ

ಸೋಲು ಗೆಲುವಾಗಿ

ನನ್ನನ್ನೇ ಆವರಿಸಿದೆ ನೀ ಸಾಹುಕಾರತಿ

#ಸತೀಶಬಾರಿ

ಅಮ್ಮ

ನನ್ನ ನಲಿವಿನಲ್ಲಿ

ತನ್ನ ನೋವು ಮರೆತವಳು

ನನ್ನ ಬರಿದಾದ ಬದುಕನ್ನು

ಬಂಗಾರ ಮಾಡಿದವಳು

ನನ್ನ ಹೊಟ್ಟೆ ತುಂಬಿಸಿ

ತಾನು ಉಪವಾಸ ಇದ್ದವಳು

ಅವಳು ನನ್ನ "ಅಮ್ಮ".

#ಸತೀಶಬಾರಿ

ಜೀವನದ ದಾರಿ ಇಷ್ಟೇ

ಮುಖದಲ್ಲಿ ನಗು

ಮನಸ್ಸಿನಲ್ಲಿ ಅಳು

ಕಷ್ಟಪಟ್ಟು ದುಡಿಯುವುದು

ಸುಖವಾಗಿ ಜೀವನ ಸಾಗಿಸುವುದು

#ಸತೀಶಬಾರಿ

ತೊಲಗಲಿ ಧರ್ಮಾಂದ ದುಷ್ಟರು

ತೊಲಗಲಿ ಧರ್ಮಾಂದ ದುಷ್ಟರು

ನಗು ನಗುತ್ತಿರಲಿ ಒಳ್ಳೆಯ ಮನಸ್ಸುಗಳು

ಸಾಕಾರವಾಗಲಿ ಚಂದದ ಕನಸುಗಳು

#ಸತೀಶಬಾರಿ

ಬದಲಾದೆ ನಾನು ಆದರೆ ಅವರು

ಬದಲಾಯಿತು ನನ್ನ ಲೋಕ

ಕಾಲಾಕಸವಾಗಿ ಕಂಡರು
ಆದರೆ, ಒಂದು ವ್ಯಕ್ತಿತ್ವವಾಗಿ ನಿಂತಿರುವೆ

ಕೈಲಾಗದವನು ಎಂದರು
ಆದರೆ, ಕೈತುಂಬ ಕೆಲಸ ಮಾಡುತ್ತಿರುವೆ

ಬೇಡುವವನಾಗುತ್ತಾನೆ ಎಂದುಕೊಂಡರು
ಆದರೆ, ನೀಡುವವನಾದೆ

ಶತ್ರುವಂತೆ ನೋಡುತಿರುವರು
ಆದರೆ, ಅವರನ್ನು ಮಿತ್ರರಂತೆ ನೋಡುತ್ತಿರುವೆ

ಅಂದವರಿಗೆ ಕೆಲಸದಿಂದ ಉತ್ತರಿಸಿದೆ
ಆದರೆ, ಅವರು ನನ್ನ ಆಕ್ಷೇಪಣೆ ಮಾಡುತ್ತಾ ಸಮಯ ವ್ಯರ್ಥ ಮಾಡುತ್ತಿರುವರು

ಬದಲಾಯಿತು ನನ್ನ ಲೋಕ
ಆದರೆ, ಅವರು ಬದಲಾಗುತ್ತಿಲ್ಲ.

#ಸತೀಶಬಾರಿ

ನನ್ನವಳು

ನಾನು ಹೇಳುತ್ತಿದ್ದೆ ಅವಳಿಗೆ :

ಒಬ್ಬಂಟಿಯಾಗಿದ್ದ ಬದುಕಿನಲ್ಲಿ ನೀ ಜೊತೆಯಾದೆ

ಕೆಂಡದಂತ್ತಿದ್ದ ಬದುಕನ್ನು ತಂಪಾಗಿಸಿದೆ

ನಿನ್ನಲ್ಲಿ ನನ್ನನ್ನೇ ನಾ ಕಂಡೆ ಎಂದು

ಅವಳು ನನಗೆ :

ಅದಿರಲಿ

 ನಾ ಹೋಗುವ ದಾರೀಲಿ ನೀ ಯಾಕೆ ಬಂದೆ ಎನ್ನಬೇಕೆ? 😭 😭

#ಸತೀಶಬಾರಿ

ಕಾಯಕವಿಲ್ಲದ ಬದುಕು ಯಾತಕ್ಕೆ

ಹಿಂದಿನದು ನೋಡಿದವರು ಯಾರೋ
ಮುಂದಿನದು ನೋಡುವವರು ಯಾರೋ
ನಾವು ನೋಡುತ್ತಿರುವ ಈ ದಿನವೇ ಕೈಲಾಸ|

ಇರುವ ಲೋಕವ ಬಿಟ್ಟು
ಪರಲೋಕಕ್ಕೆ ಆಸೆಪಡುವುದು ಯಾಕೆ

ಎಲ್ಲೋ ಇರುವ ಸ್ವರ್ಗಕ್ಕೆ ಬಡಿದಾಡುತ್ತಿರುವೆ
ಇರುವ ಸ್ಥಳವ ನರಕ ಮಾಡುತಿರುವೆ ಯಾಕೆ
ಜನ್ಮಕೊಟ್ಟ ದೇಶವೇ ಸ್ವರ್ಗ ಅಲ್ಲವೇ.

ಕಾಯಕ ಬಿಟ್ಟು ಕೈಲಾಗದವನಾದೆ
ಪ್ರೀತಿಸುವುದು ಬಿಟ್ಟು ದ್ವೇಷಿಸುವವನಾದೆ ಯಾಕೆ

ಎಲ್ಲವನ್ನೂ ಬಿಟ್ಟು ಒಮ್ಮೆ ಯೋಚಿಸು
ನೀ ನಂಬಿರುವ ದೇವರು ಕಾಯಕ ಮಾಡುತ್ತಿರುವ || .

#ಸತೀಶಬಾರಿ