ಹೃದಯ ಸಿರಿವಂತರೊ ನಾವು
ಹೃದಯ ಸಿರಿವಂತರೊ
ಹೊಟ್ಟೆಗೆ ಹಿಟ್ಟಿಲ್ಲ
ತಲೆಗೆ ಸುರಿಲ್ಲ
ಆದರೂ ನಮ್ಮ ಘನತೆಗೆನು
ಕಮ್ಮಿ ಇಲ್ಲ
ಹಣಕ್ಕೆ ಬೆಲೆಯಿಲ್ಲ
ಪ್ರೀತಿಗೆನೂ ಕಮ್ಮಿಯಿಲ್ಲ
ಗೌರವಕ್ಕೆ ತಲೆ ಬಾಗುವೆವು ನಾವೆಲ್ಲ
ಜಾತಿ ಧರ್ಮಗಳ ಬೇಲಿ ಇಲ್ಲ
ಮೇಲು/ಕೀಳಿನ ಭೇದ ಭಾವವಿಲ್ಲ
ಸ್ನೇಹವೇ ಜೀವ ನಮಗೆಲ್ಲ
ಜೀವನವನ್ನು ಅನುಭವಿಸುತ್ತೆವೆ
ಅದು ಎಷ್ಟೇಂದರೆ
ಸಾವಿಗೆ ಅಂಜುವುದಿಲ್ಲ
ನಗುವಿಗೆನೂ ಕೊರತೆಯಿಲ್ಲ
ಯಾಕೆಂದರೆ -
ನಾವು ಹೃದಯ ಸಿರಿವಂತರು
#ಸತೀಶಬಾರಿ