ಸಾಮರಸ್ಯ ಜೀವನ
_____________________
ಪ್ರತಿಯೊಬ್ಬರನ್ನು ಪ್ರೀತಿಸಿ ಗೌರವವಿಸುವುದು, ಮನುಷ್ಯನು ಮತ್ತೊಬ್ಬ ಮನುಷ್ಯನ ಜೊತೆ ಒಳ್ಳೆಯ ಸಹ-ಜೀವನವನ್ನು ಹೊಂದಬೇಕು, ಸಹೃದಯತೆಯಿಂದ ಜೀವಿಸಬೇಕು ಎಂಬ ಕಲ್ಪನೆಯೇ "ಸಾಮರಸ್ಯ".
ನಾವೆಲ್ಲರೂ ಒಂದೇ ನಮ್ಮಲ್ಲಿ ಸೈದ್ಧಾಂತಿಕ ಅಭಿಪ್ರಾಯಗಳು ಬೇರೆ ಬೇರೆ ಇರಬಹುದು ಆದರೆ, ನಾವೆಲ್ಲರೂ ಮನುಷ್ಯರು ಎಂಬ ಭಾವನೆ, ಪ್ರೀತಿ ನಮ್ಮಲ್ಲಿ ಬರಬೇಕು. ಮನುಷ್ಯ ತನ್ನ ಮನಸ್ಸಿಗೆ ಹಾಕಿಕೊಂಡಿರುವ ಜಾತಿ ಧರ್ಮ ಎಂಬ ಬೇಲಿಯಿಂದ ನರಳಾಡಿ ಬಡಿದಾಡಿ ತನಗೂ ಸುಖವಿಲ್ಲ ಇನ್ನೊಬ್ಬರಿಗು ಸುಖವಿಲ್ಲದೆ ಬಾಳುತ್ತಿರುವುದು ಅಸಹ್ಯ ಸಂಗತಿ. ಮನುಷ್ಯನು ಸಂಕುಚಿತ ಮನಸ್ಸಿಂದ ಹೊರಬರಲೆಬೇಕು, ಇಲ್ಲವಾದರೆ ಮನುಷ್ಯನಿಗೆ ಉಳಿಗಾಲವಿಲ್ಲ .
ಸಾಮರಸ್ಯ ಜೀವನವೇ ಒಂದು ಅದ್ಭುತವಾದ ಅನುಭವ. ಅದರಲ್ಲೂ ಭಾರತೀಯರು ವಿಶ್ವಕ್ಕೆ ಸಾಮರಸ್ಯ ಜೀವನ ಎಂದರೆ ಏನು ಅಂತ ತೋರಿಸಿಕೊಟ್ಟವರು, ಭಾರತೀಯರ ಸಾಮರಸ್ಯ ಮತ್ತು ಜೊತೆಯಾಗಿ ಕೂಡಿಬಾಳುವಿಕೆಯ ಸಂಸ್ಕೃತಿಯೇ "ಭಾರತದ ಹೆಗ್ಗುರುತು"
"ವಸುದೈವ ಕುಟುಂಬಕಂ" ಎಂದು ವಿಶ್ವಕ್ಕೆ ಸಾರಿದ ದೇಶ ಭಾರತ, ಎಂತಹ ಅದ್ಭುತ ಭಾವ ಭಾರತೀಯರದ್ದು ಇಡೀ ವಿಶ್ವವೇ ಒಂದು ಕುಟುಂಬ ಅದರಲ್ಲಿ ನಾನು ಒಬ್ಬ ಎಂಬ ಭಾವನೆ ಪ್ರತಿಯೊಬ್ಬ ಭಾರತೀಯನದ್ದು .
ಶರಣ ಶ್ರೀ ಬಸವಣ್ಣನವರು
ಇವನಾರವ ಇವನಾರವ
ಇವನಾರವನೆಂದೆನಿಸದಿರಯ್ಯ
ಇವ ನಮ್ಮವ ಇವ ನಮ್ಮವ
ಇವ ನಮ್ಮವನೆಂದೆನಿಸಯ್ಯಾ
ಕೂಡಲಸಂಗಮ ದೇವಯ್ಯಾ
ನಿಮ್ಮ ಮನೆಯ
ಮಗನೆಂದೆನಿಸಯ್ಯಾ
ಹೇಳಿದ ಹಾಗೆ,
ಮನುಷ್ಯನು ಮನುಷ್ಯನನ್ನು ಯಾವ ಜಾತಿ ಯಾವ ಧರ್ಮ ಅಂತ ನೋಡದೆ ಪ್ರತಿಯೊಬ್ಬರು ನಮ್ಮವರು
ಎಂಬ ಭಾವನೆ ನಮ್ಮಲ್ಲಿ ಬಂದಾಗ ಜೀವನವು ಶಾಂತಿಯಿಂದ ಸಾಗಲಿದೆ.
ಒಂದು ದೇಶವು ಸಂಪೂರ್ಣ ಸ್ವಾವಲಂಬನೆಯಾಗಬೇಕಾದರೆ ಆ ದೇಶದ ಜನರ ಸೌಹಾರ್ದತೆ ಮತ್ತು ಸಾಮರಸ್ಯ ಜೀವನವು ತುಂಬ ಪ್ರಮುಖ ಪಾತ್ರವಹಿಸುತ್ತದೆ. ಒಬ್ಬ ವ್ಯಕ್ತಿಯು, ಒಂದು ಸಮಾಜವು, ಒಂದು ದೇಶವು ಭೌತಿಕವಾಗಿ ಮತ್ತು ಬೌದ್ಧಿಕವಾಗಿ ಸಾಮರಸ್ಯ ಜೀವನ ನಡೆಸಿದರೆ ಉತ್ತಮ ಬೆಳವಣಿಗೆ ಕಾಣಬಹುದು, "ಭಾರತವು ಆ ದಿಶೆಯಲ್ಲಿ ಸಾಗಲಿ ಅಂತ ಹಾರೈಸುವ" .
ಜೈ ಭಾರತ , ವಂದೇ ಮಾತರಂ
#ಸತೀಶಬಾರಿ