Friday, December 25, 2015

ಜಾತಿ ಬೇಕಾ?

ಜಾತಿ ಜಾತಿ ಎಂದು ಬಡಿದಾಡಿದರು

ಜಾತಕ ಬದಲಾಗಲಿಲ್ಲವಯ್ಯಾ

ಕುಡಿಯುವ ನೀರಿಗು ಉಂಟೇ ಜಾತಿ

ತಿನ್ನುವ ಅನ್ನಕ್ಕೆ ಉಂಟೇ ಜಾತಿ

ಮೈಯಲ್ಲಿ ಹರಿವ ರಕ್ತಕೆ ಉಂಟೇ ಜಾತಿ ||

ಹುಟ್ಟುವಾಗ ಇದೆ ಜಾತಿಯಲ್ಲಿ ಹುಟ್ಟಬೇಕು

ಎಂದು ಕೇಳಲಿಲ್ಲವಯ್ಯಾ

ಹುಟ್ಟಿರುವೆ,

 ಮನುಷ್ಯನಾಗಿ ಬದುಕಬೇಕೆಂದಿರುವೆನಯ್ಯಾ

ಜಾತಿ ರಹಿತ ಸಮಾಜ ನಿರ್ಮಾಣವಾಗಲಿ
ಎಂದು

ಚಾತಕ ಪಕ್ಷಿಯಂತೆ ಕಾಯುತ್ತಿರುವೆನಯ್ಯಾ.

#ಸತೀಶಬಾರಿ

No comments:

Post a Comment