Thursday, December 31, 2015

ಹೊಸ ವರ್ಷ

ಹೊಸ ವರ್ಷ ಬಂತಂತೆ

ಅವರು ಅದು ಬಿಡ್ತಾರಂತೆ

ಇವರು ಇದು ಮಾಡುವದಿಲ್ವಂತೆ

ಅವರು ಹಾಗಿರಬೇಕೆಂತೆ

ಇವರು ಹೀಗಿರಬಾರದಂತೆ

ಏನು ಹೊಸ ವರ್ಷ ಬಂತು

ಹಾಗೆ ಹೀಗೆ ಸ್ವಾಗತ ಮಾಡ್ತಾರೆ

ಬಡೆತ್ತಾವಕ್ಕೆ

ಹೊಸ ವರ್ಷ ಬಂದು

ಒಂದು ತಿಂಗಳಾದರು ದಿನಾಂಕ

ಇನ್ನೂ ಹಳೆಯ ವರ್ಷನೆ ಹಾಕ್ತಾವೆ

ಒಂದೇ ದಿನದಲ್ಲಿ ಜಗತ್ತು ಮಧ್ಯಪಾನದಲ್ಲಿ

ಮುಳುಗಿ ಏಳುವದಕ್ಕೆ ಹೊಸ ವರ್ಷ ನೆಪ...

#ಸತೀಶಬಾರಿ

Wednesday, December 30, 2015

ಓ ಪ್ರೇಯಸಿ,

ಓ ಪ್ರೇಯಸಿ,

ನಿನಗಾಗಿ ಕಾದಿದೆ ಈ ಮನ|

ನಿನಗಾಗಿ ಚಡಪಡಿಸುತ್ತಿದೆ ಈ ಮನ||

 ಬೀಸಿರುವ ತಂಗಾಳಿ ನಿನ್ನದೆ

ಉಸಿರು ಎಂದೆನಿಸುತ್ತಿದೆ||

ನಿನ್ನನ್ನು ಪ್ರೀತಿಸಿ |

ಜಗವನ್ನೆ ಪ್ರೀತಿಸುವದ ಕಲಿತಿದೆ

ಈ ಮನ||

ನನ್ನ ಸೇರು ಬಾ ಸಾಹುಕಾರತಿ

ನಿನಗಾಗಿ ಕಾಯುತ್ತಿದ್ದಾನೆ ಈ ಬಡಪಾಯಿ ||

#ಸತೀಶಬಾರಿ

ಪ್ರೀತಿಯ ನಾಡಲ್ಲಿ

ಪ್ರೀತಿಯ ನಾಡಲ್ಲಿ

ಸಾಗಲಿ ವಿಶ್ವಮಾನವನ ತೇರು

ಸೋಲಲಿ ಅಧರ್ಮಗಳ ಹಿಂಡು

ಮಾನವೀಯತೆಯ ಬಿಡಾಗಲಿ ಈ ನಾಡು

ಭಾವನೆಗಳಿಗೆ ಬೆಲೆ ಸಿಗಲಿ

ಸುಕ್ಷಿತರ ನಾಡಾಗಲಿ

ಮಮತೆಯ ಮನಸ್ಸುಗಳು ಹುಟ್ಟಲಿ

ದುಷ್ಟ ಮನಸ್ಸುಗಳು ಸಾಯಲಿ

ಎಲ್ಲರಿಗೂ ಒಳ್ಳೆಯದಾಗಲಿ

#ಸತೀಶಬಾರಿ

Monday, December 28, 2015

ಜೀವನ ಮತ್ತು ಧರ್ಮ

ನಾನು ತಿಳಿದುಕೊಂಡಿರುವ ಹಾಗೆ,

ಜಗತ್ತಿನಲ್ಲಿ ಎಲ್ಲಾ ಧರ್ಮಗಳು ಪರಿಪೂರ್ಣ. ಇಲ್ಲಿ ಯಾವ ಧರ್ಮವು  ಮೇಲು ಅಲ್ಲಾ , ಯಾವ ಧರ್ಮವು ಕೀಳು ಅಲ್ಲಾ. ಮಾನವ ಮಾತ್ರ ಧರ್ಮವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾನೆ,
ಎಲ್ಲಾ  ಧರ್ಮಗ್ರಂಥವನ್ನು ಸಂಪೂರ್ಣ ತಿಳಿದಕೊಂಡರೆ ಅವುಗಳಲ್ಲಿನ ಸಾರಾಂಶ ಒಂದೇ "ಶಾಂತಿ, ಸಹಬಾಳ್ವೆ, ಪರಸ್ಪರ ಗೌರವ, ಮಾನವೀಯತೆ, ಪ್ರೀತಿ, ಒಳ್ಳೆಯ ಜೀವನ ಪದ್ಧತಿ".
     
        ಒಳ್ಳೆಯ ಸಂಸ್ಕಾರ ನಮ್ಮ ಕೈಯಿಡಿಯುತ್ತದೆ, ಕೆಟ್ಟ ಸಂಸ್ಕಾರ ನಮ್ಮನ್ನೇ ಸಂಹಾರ ಮಾಡುತ್ತದೆ.
ಮನುಷ್ಯ ಸತ್ತ ಮೇಲೆ ಯಾವ ಧರ್ಮ ಅಂತ ಯಾರೂ ನೋಡುವುದಿಲ್ಲ, ಇಲ್ಲಿ ಉಳಿಯುವುದು ನಮ್ಮ ಹೆಸರು ಮತ್ತು ನಾವು ಮಾಡಿದ ಕೆಲಸ ಮಾತ್ರ.

      ಒಳ್ಳೆಯವರಾಗಿ ಜೀವನ ಸಾಗಿಸೊಣ, ಕೆಟ್ಟವರನ್ನು ಒಳ್ಳೆಯವರಾಗಿಸೊಣ.

   "ಎಲ್ಲರಿಗೂ ಒಳ್ಳೆಯದಗಾಲಿ"


#ಸತೀಶಬಾರಿ

ಅಮ್ಮ ಎಂದರೆ ಏನೋ ಹರುಷವು

ಅಮ್ಮಾ,

ನಿನ್ನ ಮಡಿಲು ನನಗೆ ತೊಟ್ಟಿಲು


ನೀ ಹಚ್ಚಿದ ದೀಪವು ಉಜ್ವಲಿಸುತಿರುವುದು

ನೀ ತೋರಿಸಿದ ದಾರಿಯು ಹೂವಿನ ಹಾಸಿಗೆ ಆಗಿರುವುದು

ನನ್ನ ಪ್ರತಿ ನೋವು-ನಲ್ಲಿವಿನಲ್ಲು ನೀನೇ ಇರುವೆ ಅಮ್ಮ

ನಿನ್ನ ಕಂದನೀಡುವ ಪ್ರತಿ ಹೆಜ್ಜೆಯಲ್ಲು ನಿನ್ನದೆ ಪ್ರತಿಬಿಂಬ

ನೀನು ನನಗಾಗಿ ಮಾಡಿದ ತ್ಯಾಗ ನನ್ನ ಜೀವನದಲ್ಲಿ ಮತ್ತೆ ಯಾರು ಮಾಡಲಾರರು

Love u amma ...


#ಸತೀಶಬಾರಿ

Sunday, December 27, 2015

ಇಂ(ಧನ)

ಇಂಧನ ಸಮಸ್ಯೆ ಪರಿಹಾರ ರಾಜಕಾರಣಿಗಳಿಗೆ ಬೇಕಿಲ್ಲ ... ಯಾಕೆಂದರೆ ಇಂಧನ ಸಮಸ್ಯೆ ಜೀವಂತವಾಗಿ ಇದ್ದಷ್ಟು ದಿನವೂ ಅವರ ಮನೆ ಇಂ(ಧನ) ತುಂಬುತ್ತಿರುತ್ತದೆ...

ವಿದ್ಯುತ್ ಸಮಸ್ಯೆ ಇದ್ದಷ್ಟು ದಿನವೂ ವಿದ್ಯುತ್ ಖರೀದಿಯಲ್ಲಿ ಹಣ ಮಾಡಬಹುದು ...

ಪೆಟ್ರೋಲ್ ಡೀಸೆಲ್ ಸಮಸ್ಯೆ ಇದ್ದಷ್ಟು ದಿನವೂ ಕಾಳಸಂತೆಯಲ್ಲಿ ದುಪ್ಪಟ್ಟು ದರದಲ್ಲಿ ಮಾರಬಹುದು ...

ಸಮಸ್ಯೆಯ ಪರಿಹಾರಕ್ಕೆ ನಿರಂತರ ಸಂಶೋಧನೆ ನಡೆಯುತ್ತಿದ್ದರೆ,  ಸಂಶೋಧನೆ ಮುಚ್ಚುವ ಪ್ರಕ್ರಿಯೆಗಳು ನಿರಂತರವಾಗಿ ರಾಜಕಾರಣಿಗಳಿಂದ ನಡೆಯುತ್ತದೆ

#ಸತೀಶಬಾರಿ

ಧರ್ಮ ದೇವರು ಅವಶ್ಯಕತೆ ನಾ?

ಜೀವನದ ಅರ್ಥ ತಿಳಿದವರಿಗೆ

ಯಾವುದೇ ಧರ್ಮಗಳ ಅವಶ್ಯಕತೆ ಇಲ್ಲ.

ಬದುಕುವ ಅರ್ಥ ತಿಳಿದವರಿಗೆ

ಯಾವುದೇ ಜಾತಿಯ ಅವಶ್ಯಕತೆ ಇಲ್ಲ ..

ಹಸಿದಾಗ ಯಾವುದೇ ಧರ್ಮ ಅನ್ನ ಕೊಡುವುದಿಲ್ಲ

ನಾವು ಮಾಡಿದ ಸಾಲದ ಬಡ್ಡಿಯು ಯಾವ ದೇವರು

ತಿರಿಸಲು ಬರುವುದಿಲ್ಲ.

ಧರ್ಮ ನಮ್ಮ ನಡತೆಯಲ್ಲಿ ಇರಬೇಕೆ ಹೊರತು

ಧರ್ಮ ದೇವರೆ ಜೀವನವಾಗಬಾರದು.

#ಸತೀಶಬಾರಿ

(ವಿ.ಸೂ: ಇದು ನನ್ನ ಅಭಿಪ್ರಾಯ ಮಾತ್ರ.  ಯಾರಿಗೂ ನೋವು ಮಾಡುವ ಉದ್ದೇಶ ನನ್ನಲ್ಲಿ ಇಲ್ಲ)

Saturday, December 26, 2015

ರವಿವಾರ ಮಾಡಿದ್ದಾದರು ಏನು?

ರವಿವಾರ ಬರುತ್ತೆಂದು

ಒಂದು ವಾರ ಕಾಯುವುದೆ ಆಯಿತು|

ರವಿವಾರ ಬರುತ್ತೆಂದು

ಒಂದು ವಾರ ಕಾಯುವುದೆ ಆಯಿತು||

ರವಿವಾರ ಬಂದಾಗ ಮಲಗಿದ್ದೆ ಆಯಿತು

 ಸಂಜೆ ಅಂದೆ ಯಾಕಾಗಿ ಬರುವುದೊ ಈ

ಈ ರವಿವಾರ ಎಂದು ||

ಮತ್ತೆ ಸೋಮವಾರ ಅಂದೆ

ರವಿವಾರ ಎಷ್ಟು ಬೇಗ  ಮುಗಿಯಿತು ಎಂದು

ರವಿವಾರ ಬರುವುದು ಎಂದು

ಒಂದು ವಾರ ಕಾಯುವುದೆ ಆಯಿತು||…

#ಸತೀಶಬಾರಿ

ಬದಲಾವಣೆ

ಬದಲಾವಣೆಯ ಗಾಳಿ ಬಿಸುತ್ತಿದೆ|

ಕಾಲ ಬದಲಾವಣೆ ಬಯಸುತ್ತಿದೆ

ನಮ್ಮ ಸಂಸ್ಕೃತಿ ರಕ್ಷಿಸುತ್ತಾ

ನಾವು ಬದಲಾಗಬೇಕು||

ಒಳ್ಳೆಯ ಬದಲಾವಣೆ ಪ್ರಕೃತಿ ನಿಯಮ

ಕೆಟ್ಟ ಬದಲಾವಣೆ ವಿಕೃತಿಯ ನಿಯಮ||

ಒಳ್ಳೆಯ ಬದಲಾವಣೆಗೆ ಜೈ ಅಂದುಬಿಡಿ.

#ಸತೀಶಬಾರಿ

ಕೋಪ ಮಾಡಿಕೊಂಡರೆ ನನ್ನವಳು ಮುದೆವಿ

ಲೇ ಹುಡುಗಿ,

ಕೋಪಯಾಕೆ ಪ್ರೇಯಸಿ|

ನಾನ ಆದೆ ಪರದೇಶಿ ||

ಬಿಂಕ ಬಿಡೆ ಕೊಂಕ್ಕು ಬಿಡೆ |

ನೀ ನನ್ನ ಸಾಹುಕಾರತಿ |

ಮತ್ತಯಾವಳ ಸವಾಸ ಇಲ್ಲವೆ ಮುದೆವಿ||.

#ಸತೀಶಬಾರಿ

Friday, December 25, 2015

ಮಾಂಸಾ ಬೇಕಾ?

ತಿನ್ನುವುದಕ್ಕೆ ಬದುಕುವದಕ್ಕಿಂತ,

ಬದುಕುವುದಕ್ಕೆ ತಿನ್ನುವುದು ಜೀವನ ....

ಮಾಂಸಕ್ಕಾಗಿ ಬಡಿದಾಡುವ ಜನರೇ

ಸ್ವಲ್ಪ ಕಣ್ಣು ತೆರೆದುಕೊಂಡು ನೋಡಿ

ಊಟ ಮಾಡುವದಕ್ಕು ತುತ್ತು

ಅನ್ನವಿಲ್ಲದೆ ಸಾಯುವ ಜನರಿದ್ದಾರೆ..

 #ಸತೀಶಬಾರಿ

ಗೆಲುವೆ ಉತ್ತರ

ನಿನ್ನೆಯ ಆ ಅನುಭವ

ನೆನೆದರೆ ಕಣ್ಣಿರು ಬರದೆ ಇರದು.

ಅನುಭವಿಸಿದ ಕಷ್ಟಗಳಿಗೆ

ನನ್ನ ಗೆಲುವು ಒಂದೇ ಉತ್ತರ

#ಸತೀಶಬಾರಿ

ಮನಸ್ಸು ಎಲ್ಲದಕ್ಕೂ ಮೂಲ

ಮನುಷ್ಯನ ತನ್ನ ಕೆಟ್ಟ ವ್ಯಕ್ತಿತ್ವ ಬೆತ್ತಲೆಯದಾಗ ,

ಅವನು ಇದ್ದರೂ ಸತ್ತಂತೆ.

ಮನಸ್ಸು ಕೊಳಕು ಇದ್ದರೆ,

ಹೊರಗಿನ ಬರಿ ತೊರಿಸುವಿಕೆಯ ಬಾಳು
ಕೋಚ್ಚೆಯ ಸಮ......

#ಸತೀಶಬಾರಿ

ಇರಬೇಕು

ಸೌಂದರ್ಯ ನಮ್ಮ ನಡತೆಯಲ್ಲಿ ಇರಬೇಕು,

ಧರ್ಮ ಮನೆಯಲ್ಲಿ ಇರಬೇಕು,

ಸತ್ಯ ವ್ಯವಹಾರದಲ್ಲಿರಬೇಕು

ಅನ್ನ ಹಸಿದವರ ತಟ್ಟೆಯಲ್ಲಿರಬೇಕು

ಪ್ರೀತಿ ಮನಸ್ಸಿನಲ್ಲಿರಬೇಕು

ಇರಬೇಕು ಇರಬೇಕು ಭಾರತದಲ್ಲಿ ಸರ್ವರಿಗೂ ಸಮಾವಕಾಶ ಇರಬೇಕು

#ಸತೀಶಬಾರಿ

ಪ್ರಕೃತಿಯೇ ಅಂತಿಮ

ಮಳೆ ನಿಂತರು ಮಳೆ ಹನಿ ನಿಲ್ಲಲಿಲ್ಲ,

ಯುದ್ಧ ಮುಗಿದರೂ ಯುದ್ಧದ ಗಾಯ ಮಾಸಲಿಲ್ಲ,

ಒಂದು ಸಣ್ಣ ಇರುವೆ ಜೀವವು ವಾಪಸ್ ಕೊಡಲು ಅಧಿಕಾರ

ಇಲ್ಲದ ಮನುಷ್ಯನಿಗೆ , ಮನುಷ್ಯರ  ಮತ್ತು ಪ್ರಾಣಿಗಳ ಜೀವ

ತೆಗೆಯಲು ಅಧಿಕಾರ ಕೊಟ್ಟವರು ಯಾರು??????

ಭೂಮಿಯ ಪ್ರತಿಯೊಂದರ ಮೇಲೂ ಅಧಿಕಾರ ಇರುವದು ಪ್ರಕೃತಿಗೆ ಮಾತ್ರ.

#ಸತೀಶಬಾರಿ

ನನ್ನ ಜೀವನ

ನನ್ನ ಜೀವನದಲ್ಲಿ ಕಲಿಯುವುದು

ತುಂಬಾ ಇದೆ.

ಸಾಯುವವರೆಗೂ ಕಲಿಯಬೇಕು ಎಂಬ

ಬಯಕೆ ಇದೆ,  

ವಾಸ್ತವಿಕತೆಯಲ್ಲಿ ಬದುಕುವ ನಾನು,

ಒಳ್ಳೆಯದನ್ನು ಹೇಳಿಕೊಡುವ

ಕಿರಿಯರು ಮತ್ತು ಹಿರಿಯರು

ಯಾರೇ  ಆಗಿರಲಿ ಅವರನ್ನು

ನನ್ನ ಗುರುಗಳಾಗಿ ಸ್ವಿಕರಿಸಲಿದ್ದೆನೆ.            

  "ಸಾರ್ಥಕ ಬದುಕಿನಡೆಗೆ"

#ಸತೀಶಬಾರಿ

ಜೀವನ ಸುಲಭ

ಜಗತ್ತಿನಲ್ಲಿ ನಮಗೆ ಇರುವ ಮಾರ್ಗ  ಎರಡೇ,

ಒಂದು ಒಳ್ಳೆಯ ಮಾರ್ಗ

ಇನ್ನೊಂದು ಕೆಟ್ಟಮಾರ್ಗ

ನಾವು ಯಾವುದೇ ಮಾರ್ಗ ಆಯ್ಕೆ ಮಾಡಿಕೊಂಡರು
ಆ ಮಾರ್ಗ ನಮ್ಮ ಜೀವನದ ಕನ್ನಡಿಯಾಗಿರುತ್ತದೆ.

#ಸತೀಶಬಾರಿ

ಕುಡಿಬಾಳು

ಇತಿಹಾಸ ಕೆದಕಿ

ಜಗಳಮಾಡಿ ಬೇರೆ ಆಗುವದಕ್ಕಿಂತ,

ಒಂದಾಗಿ ಸಹಬಾಳ್ವೆ ಇಂದ ಬದುಕಿ

ಇತಿಹಾಸ ನಿರ್ಮಿಸುವುದು

ಉತ್ತಮ, 😘 😍

#ಸತೀಶಬಾರಿ

ಜಯಮ್ಮನ ಪಾಲಿಟಿಕ್ಸ್

ಮಳೆಯ ಆರ್ಭಟದಲ್ಲಿ

ಸಾವಿನ ಮನೆಯಲ್ಲಿ

ಜಯಮ್ಮನ ಪಾಲಿಟಿಕ್ಸ್ ನಲ್ಲಿ

ಚೆನ್ನೈ ಜನರಿಗೆ ನೆರವು ನೀಡಿದವರು

ನಮ್ಮ ಸೈನಿಕರು ಮತ್ತು ಜನರು

#ಸತೀಶಬಾರಿ

ಗಣಿದಣಿ

ರೈತ:-
ಮಣ್ಣು ನಮಗೆ ಕಣ್ಣು
ಅದರಲ್ಲಿ ದುಡಿದು ಊಟಮಾಡಿ ಮಲಗಿದಾಗ ತಂಪಾಗುತ್ತದೆ ನಮ್ಮ ಕಣ್ಣು.  

ಗಣಿದಣಿ :
ಮಣ್ಣು ನಮ್ಮ ಕಣ್ಣು
ಅದಕ್ಕೆ ಅದರಮೇಲಿದೆ ನಮ್ಮ ಕಣ್ಣು
ಕದ್ದು ಮಾರಿದ  ಹಣ ನೋಡಿ ಕೆಂಪಾಗಿದೆ ಲೋಕಾಯುಕ್ತ ಕಣ್ಣು
ಕೊನೆಗೆ ರಾಜಕಾರಣಿಗಳು ಕಿತ್ತಾಕಿದ್ದಾರೆ ಲೋಕಾಯುಕ್ತ ಕಣ್ಣು +918149975888

#ಸತೀಶಬಾರಿ

ಉತ್ತಮ

ದೇವರು ಮತ್ತು ಧರ್ಮಕ್ಕೆ ಭಕ್ತನಾಗುವ ಮೊದಲು,

ತಂದೆ-ತಾಯಿಗೆ ಉತ್ತಮ ಮಗನಾಗಿ

ಸಹೋದರ-ಸಹೋದರಿಗೆ ಉತ್ತಮ ಸಹೋದರನಾಗಿ

ಸ್ನೇಹಿತರಿಗೆ ಉತ್ತಮ ಸ್ನೇಹಿತನಾಗಿ

ಸಮಾಜಕ್ಕೆ ಉತ್ತಮ ನಾಗರಿಕನಾಗಿ

ದೇಶಕ್ಕೆ ಉತ್ತಮ ಪ್ರಜೆಯಾಗಿ||

ಉತ್ತಮರಲ್ಲಿ ಅತ್ಯುತ್ತಮನಾಗಿ
ಬದುಕು ಮಾನವ.

#ಸತೀಶಬಾರಿ

ಸುಳ್ಳೆ ಸುಳ್ಳು

ಸುಳ್ಳಿಗಾಗಿ ಬಡಿದಾಡಿ

ಇರುವ ಸ್ಥಳವು ನರಕವಮಾಡಿ

ನಿನ್ನನ್ನು ನೀ ಮರೆತೆ ಮಾನವ

#ಸತೀಶಬಾರಿ

ನಡತೆ

ಸೌಂದರ್ಯ ನಮ್ಮ ನಡತೆಯಲ್ಲಿ ಇರಬೇಕು,

ಧರ್ಮ ಮನೆಯಲ್ಲಿ ಇರಬೇಕು,

ಸತ್ಯ ವ್ಯವಹಾರದಲ್ಲಿರಬೇಕು

ಅನ್ನ ಹಸಿದವರ ತಟ್ಟೆಯಲ್ಲಿರಬೇಕು

ಪ್ರೀತಿ ಮನಸ್ಸಿನಲ್ಲಿರಬೇಕು



#ಸತೀಶಬಾರಿ

ವ್ಯಕ್ತಿತ ಮೂಖ್ಯ

ಮೈತುಂಬ ಬಟ್ಟೆ ಹಾಕಿಕೊಂಡರು ವ್ಯಕ್ತಿತ್ವ ಬೆತ್ತಲಾಗಿ!

ನಿನ್ನ ಮನಸಿಗೆ ಬ್ಯಾರಿಕೇಡ ಹಾಕಿ,

ವ್ಯಕ್ತಿತ್ವಕ್ಕೆ ಮುಖವಾಡ ಹಾಕಿ

ಸಮಾಜದಲ್ಲಿ ತಲೆತಗ್ಗಿಸಿ,

ನಿನಗೆ ನೀನೇ ನೇಣು ಹಾಕಿಕೊಂಡಿರುವೆ ಮನುಜ.

#ಸತೀಶಬಾರಿ

ಆತ್ಮಸಾಕ್ಷಿ

ಮನುಷ್ಯ ಮನುಷ್ಯನನ್ನು ಮುಟ್ಟಿದರೆ ಮೈಲಿಗೆಯಾಗದು,
ಮೈಲಿಗೆಯಾಗಿರುವುದು ಮನಸ್ಸು ಗಳು.

ಯಾರೂ ತಿಂದ ಎಲೆಯಮೇಲೆ ಊರುಳಾಡಿದರೆ
ರೋಗ ನಿವಾರಣೆಯಾಗದು,

ಎಲೆಯಮೇಲಿರುವ ಅನ್ನವು ಹಸಿದವನ ಹೊಟ್ಟೆಗೆ ಸೇರಿದರೆ ರೋಗ ಕಡಿಮೆಯಾಗುವುದು.

#ಸತೀಶಬಾರಿ

ದೇವರು ಒಬ್ಬನೇ

ನನ್ನಳೊಗಿರುವ ಶಿವನು ನನ್ನನ್ನು ಹಿಂದು ಮಾಡಲಿಲ್ಲ.

ನನ್ನಳೊಗಿರುವ ಅಲ್ಲಾಹನು ನನ್ನನ್ನು ಮುಸ್ಲಿಂ ಮಾಡಲಿಲ್ಲ,

ನನ್ನಳೊಗಿರುವ ಯೇಸುವು ನನ್ನನ್ನು ಕ್ರೈಸ್ತನಾಗಿ ಮಾಡಲಿಲ್ಲ,

ನನ್ನಳೊಗಿರುವ ಗುರುನಾನಕರು ನನ್ನನ್ನು ಸಿಖ್ಖನಾಗಿ ಮಾಡಲಿಲ್ಲ,

ನನ್ನಳೊಗಿರುವ ಮಾಹವೀರ ನನ್ನನ್ನು ಜೈನನಾಗಿ ಮಾಡಲಿಲ್ಲ,

ನನ್ನಳೊಗಿರುವ ಬುದ್ಧನು ನನ್ನನ್ನು ಬೌದ್ಧನಾಗಿ ಮಾಡಲಿಲ್ಲ,

ನನ್ನಳೊಗಿರುವ ಬಸವಣ್ಣನವರು ನನ್ನನ್ನು ಲಿಂಗಾಯತನಾಗಿ ಮಾಡಲಿಲ್ಲ.

ಯಾಕೆಂದರೆ ಅವರೆಲ್ಲರೂ ಸೇರಿ ನನ್ನಳೊಗಿದ್ದು
ನನ್ನನ್ನು ವಿಶ್ವಮಾನವನ ಹೃದಯಿ ಮಾಡಿದ್ದಾರೆ

#ಸತೀಶಬಾರಿ

ಬರೆಯುವುದೆ ನನ್ನ ಖುಷಿ

ಬರೆಯಬೇಕು ಎಂಬ ಹಂಬಲ

ಬರೆಯುತ್ತಿದ್ದರೆ ತುಂಬುತ್ತಿರುವ ಹಾಳೆಗಳು

ಎಷ್ಟೇ ಬರೆದರೂ ಮುಗಿಯುತ್ತಿಲ್ಲ ಪದಗಳ ಸಾಲು

ಬರೆಯಲು ಏನು ಬೇಕು

ಭಾವನೆ ತುಂಬಿದ ಮನ ಒಂದೇ ಸಾಕು. 😘

#ಸತೀಶಬಾರಿ

ಓಟು ನೋಟು

ಅವರಿಗೆ ಬೇಕು ಓಟು

ಇವರಿಗೆ ಬೇಕು ನೋಟು ||

ಅವರಿಗೆ ಬೇಕು ಓಟು

ಇವರಿಗೆ ಬೇಕು ನೋಟು ||

ಅಭಿವೃದ್ಧಿಗೆ ಬಿತ್ತು ಏಟು.

#ಸತೀಶಬಾರಿ

ಬರಗಾಲ

ಬರಗಾಲಾ ಬಂದಾಗ

ಸರಕಾರ ಮಲಗಿರಲು

ಗುಳೆಹೋರಟಿ ಯಾತಾಕ! ||

ಗುಳೆಹೋರಟಿ ಯಾತಾಕ!

ಜನ್ಮಕೊಟ್ಟ ಊರೇ ಕೈಯಿಡಿಯದಾಯಿತಾ.

#ಸತೀಶಬಾರಿ

ನನ್ನ ನಿಲುವು

ನನ್ನ ನಿಲುವು ಸ್ಪಷ್ಟ
ವೈಯಕ್ತಿಕವಾಗಿ ನಾನು ಯಾರ ವಿರೋಧಿಯು ಅಲ್ಲ.
ಇಲ್ಲಿ ಯಾರನ್ನೂ ಹಿಯ್ಯಾಳಿಸಲು ನಾನಿಲ್ಲ.

ನನಗೆ ನೋವಿರುವುದು ಜಾತಿ ವ್ಯವಸ್ಥೆಯ ಬಗ್ಗೆ. ಅನುಕಂಪವಿರುವುದು ತುಳಿತಕ್ಕೆ ಒಳಗಾದವರ ಬಗ್ಗೆ, ಕೋಪವಿರುವುದು ಮನುಷ್ಯರನ್ನು ಮನುಷ್ಯರ ಹಾಗೆ ನೋಡದ ಮನಸ್ಸುಗಳ ಬಗ್ಗೆ.

ನಮಗಾಗಿ ತಮ್ಮ ಜೀವನವೇ ಸಮರ್ಪಿಸಿದ ಡಾ|| ಬಾಬಾ ಸಾಹೇಬರ ಮತ್ತು ಬಸವಣ್ಣನವರ ಕನಸುಗಳು ಸಾಕಾರವಾಗಲು ಇನ್ನು ಎಷ್ಟು ವರ್ಷಗಳು ಬೇಕು.

ಮನಸ್ಸಿನಲ್ಲಿ ಪೂಜಿಸಬೇಕಾದ  ಮಹನೀಯರನ್ನು ಚೌಕ ಮತ್ತು ಸರ್ಕಲ್ ಗಳನ್ನೂ ಮಾಡಿ ಬೀದಿಗಳಲ್ಲಿ ನಿಲ್ಲಿಸಿದ್ದೆವೆ.


#ಸತೀಶಬಾರಿ

ಪ್ರೀತಿಯ ರಾಯಭಾರಿ

ಪೊಕಿರಿ ಅಲ್ಲವೆ

ಪ್ರೀತಿಯ ರಾಯಭಾರಿ ನಾ

ಜೊತೆಯಿರೇ ಜೊತೆಗಾರತಿ

ನೀ ನನ್ನ ಜೀವನದ ಸಾಹುಕಾರತಿ.

#ಸತೀಶಬಾರಿ

ಸಮಾನತೆ

ಸಮಾನತೆ ಸಮಾನತೆ ಅಂತ

ಕಿರುಚಾಡುವವನಂತೆ,

ಅವನೆ ಈಗ ಸಮಾನತೆಯ ಸರ್ವಾಧಿಕಾರಿ ಅಂತೆ!.

#ಸತೀಶಬಾರಿ

ನನ್ನ ಮೂಬೈಲ

ಕೊನೆಗೂ ಕೈಯಿಡಿದಳು ಪ್ರೇಯಸಿ

ಅವಳನ್ನು ಪಡೆದ ನಾನೇ ಸಾಹಸಿ

ಅವಳೇ ನನ್ನವಳು Micromax sliver5 ರೀ.


#ಸತೀಶಬಾರಿ

ಜಾತಿ ಬೇಕಾ?

ಜಾತಿ ಜಾತಿ ಎಂದು ಬಡಿದಾಡಿದರು

ಜಾತಕ ಬದಲಾಗಲಿಲ್ಲವಯ್ಯಾ

ಕುಡಿಯುವ ನೀರಿಗು ಉಂಟೇ ಜಾತಿ

ತಿನ್ನುವ ಅನ್ನಕ್ಕೆ ಉಂಟೇ ಜಾತಿ

ಮೈಯಲ್ಲಿ ಹರಿವ ರಕ್ತಕೆ ಉಂಟೇ ಜಾತಿ ||

ಹುಟ್ಟುವಾಗ ಇದೆ ಜಾತಿಯಲ್ಲಿ ಹುಟ್ಟಬೇಕು

ಎಂದು ಕೇಳಲಿಲ್ಲವಯ್ಯಾ

ಹುಟ್ಟಿರುವೆ,

 ಮನುಷ್ಯನಾಗಿ ಬದುಕಬೇಕೆಂದಿರುವೆನಯ್ಯಾ

ಜಾತಿ ರಹಿತ ಸಮಾಜ ನಿರ್ಮಾಣವಾಗಲಿ
ಎಂದು

ಚಾತಕ ಪಕ್ಷಿಯಂತೆ ಕಾಯುತ್ತಿರುವೆನಯ್ಯಾ.

#ಸತೀಶಬಾರಿ

ನನ್ನ ಅಪ್ಪ

ಅಪ್ಪ

  ನನ್ನ ಜೀವನದ ಕಾವಲುಗಾರ

ನನ್ನ ಯಶಸ್ಸಿನಲ್ಲಿ ಪಾಲುಗಾರ

ತನ್ನ ನೋವಿನಲ್ಲು ನನ್ನ ನಗಿಸುವ ಹಾಸ್ಯಗಾರ

 ಬಯ್ಯುತ್ತ ನನ್ನ ಜೀವನಕ್ಕೆ ರೂಪಕೊಟ್ಟ ಶಿಲ್ಪಿ

ನಮಗಾಗಿ ಜೀವನ ಸವೆಸಿದ ಶ್ರಮಜೀವಿ

ನಿಯತ್ತು ಜೀವನದ ಮೊದಲ ಮೆಟ್ಟಿಲು ಅಂತ ಹೇಳಿಕೊಟ್ಟ ಶಿಕ್ಷಕ

ತಪ್ಪು ಮಾಡಿದಾಗ ಸ್ನೇಹಿತನಂತೆ ಬುದ್ಧಿ ಹೇಳುವ ಸ್ನೇಹಿತ.

ಅಪ್ಪ ನನಗೆ ನೀನೇ ಮಾದರಿ .. Love u appa

#ಸತೀಶಬಾರಿ

ನನ್ನವಳು

ನನ್ನವಳು ಗುಳಿಕೆನ್ನೆಯವಳು

ಕುಂತ್ರೆ ನಿಂತ್ರೆ ಅವಳ್ದೆ ಧ್ಯಾನ

ನನ್ನ ಹೃದಯಕಿಲ್ಲ ಸಮಾಧಾನ ||

ನನ್ನವಳು ಗುಳಿಕೆನ್ನೆಯವಳು

ನನ್ನನ್ನು ಒಂದು ಕ್ಷಣವೂ ಬಿಟ್ಟಿರದವಳು

ರೂಪವತಿ ಚಂದವತಿ ಪ್ರಾಣಸಖಿ

ಅವಳೇ ನನ್ನ ಜೀವನದ ಒಡತಿ

#ಸತೀಶಬಾರಿ

ಜೀವನ

ಮಾರಾಟಗಾರನಾಗು ಮೋಸಗಾರನಾಗಬೇಡ

ಸೊಗಸುಗಾರನಾಗು ಸೋಗುಹಾಕಬೇಡ

ಧರ್ಮನಾಗು ಅಧರ್ಮನಾಗಬೇಡ

ಸೋಲನ್ನು ಗೆಲ್ಲು ಹತಾಶನಾಗಬೇಡ

ಧೈರ್ಯವಂತನಾಗು ಹೇಡಿಹಾಗಬೇಡ.

ಜೀವನದಲ್ಲಿ ಏನು ಬೇಕು ಏನು ಬೇಡ ಅಂತ ನಿರ್ಧರಿಸುವ ಬುದ್ಧಿ ನಮಗಿದೆ ಅಂದಮೇಲೆ ಜೀವನ ಸನ್ಮಾರ್ಗದಲ್ಲಿ ಸಾಗಿಸುವ ಬುದ್ಧಿ ನಮಗಿರುತ್ತೆ

#ಸತೀಶಬಾರಿ

ಹನಿಗವನ

ಬಂದವಳು ನನ್ನವಳು

ಮುತ್ತು ಕೊಟ್ಟಳು ನನ್ನವಳು

ನಶೆ ಏರಿತು ನನ್ನನ್ನು ನಾ ಮರೆತೇ

ಅವಳನ್ನು ಮರೆಯಲಿಲ್ಲ

ನಶೆ ಇಳಿದಾಗ ಗೊತ್ತಾಗಿದ್ದು ಅದು ಕನಸೇಂದು!

ಎಲ್ಲಿರುವೆ ಸಾಹುಕಾರತಿ

ನಿನಗಾಗಿ ಕಾದಿದೆ ಈ ಹೃದಯ ಚಾತಕಪಕ್ಷಿ

#ಸತೀಶಬಾರಿ