Wednesday, November 30, 2016

ನಲ್ಲೆ

ಅನುಮಾನ ಬೇಡ ನಲ್ಲೆ
ನಾನು ನಿನ್ನಲ್ಲೆ
ನಿನ್ನೊಳಗಿನ ಭಾವದಲ್ಲಿ
ಬಂಧಿಯಾದೆನಲ್ಲೆ

ಹತ್ತಾರು ಕವನಗಳ
ಸ್ಪೂರ್ತಿ ನೀನು
ನೂರಾರು ಸಾಲುಗಳ
ಚಿಲುಮೆ ನೀನು
ನನ್ನ ಅಕ್ಷರಗಳ
ಸಾಕ್ಷಾತ್ಕಾರ ನೀನು

ಬೀಡು ನೀ ಮೌನ
ಸಂತೈಸಲು ಕಾಯುತ್ತಿದ್ದೆ
ನನ್ನ ಈ ಮನ

#ಸತೀಶಬಾರಿ

Tuesday, November 22, 2016

Hosa

ಪ್ರೀತಿಯಿಂದ ಜೊತೆಯಾಗಿ
ಸಾಗಿದ ಪಯಣಕ್ಕಿಗ ಬೆಲೆ ಇಲ್ಲಾವಾಯಿತೆ

ಎದೆಯಲ್ಲಿ ನೀ ಬರೆದ
ಕಾಮನಬಿಲ್ಲಿನ ಚಿತ್ತಾರ ಚಿಧ್ರವಾಯಿತೆ

Sunday, September 25, 2016

ಹೇಳಿ

ನೀ ಬರೆದ ಪತ್ರಕ್ಕೆ
ಹೇಗೆ ಉತ್ತರಿಸಲಿ
ನಾ ತಳಿಯೆ ನಲ್ಲೆ

ಬದುಕು ಒಂದು ಹರಕೆ
ಪ್ರೀತಿ ಅದಕ್ಕೆ ಮುಡಿಪು

Friday, August 19, 2016

Hosa

ಭಾರವಾದ ಜೀವನದಲ್ಲಿ
ನಿನ್ನ ನೆನಪುಗಳ ಹೊರ

ಎರವಲು ಕೊಡುವೆಯ
ಸಖಿ ಹಾ ನಿನ್ನ ಕಲ್ಲು ಮನಸ್ಸಾ
ತಾಳಲಾರೆನು ನೀ
ಇರದ ಈ ಸಮಯ

ನೋವಿನ ಕಣ್ಣಹನಿ
ಜಾರುತ್ತಿದೆ ನಿನ್ನ ಕಾಣದೆ
ಕಣ್ಣಹನಿಗಳಿಗೆ ಲೆಕ್ಕವಿಲ್ಲ
ಇನ್ನೂ ನಿನ್ನ ನೆನಪುಗಳೆ ನನಗೆಲ್ಲಾ 

ವರುಷಗಳು ಹುರುಳುತಿವೆ
ಹರುಷಗಳು ಕರಗುತ್ತಿವೆ
ನಿನ್ನ ಪ್ರೀತಿ ಇನ್ನೂ
ಮರಿಚಿಕೆಯಾಗುತ್ತಿದೆ.

ನಿನ್ನ ಜೊತೆ ನನಸಿನ
ಜೀವನದಲ್ಲಿ ಸಾಗಬೇಕೆಂದು ಕೊಂಡೆ
ಆದರೆ ನೀ ಇನ್ನೂ ಕನಸು

#ಸತೀಶಬಾರಿ

Tuesday, July 19, 2016

೧)ದೇವರನ್ನೇಕೆ ಹುಡುಕುವಿರಿ.
೨)ಆ ಧರ್ಮ ಈ ಧರ್ಮ ಅಂತೇಕೆ ಬಡಿದಾಡುವಿರಿ.
೩)ಬದುಕಿದ್ದಾಗ ಸಿಗದ ಸ್ವರ್ಗ ಸತ್ತ ಮೇಲೆ ಅನುಭವಿಸಲೇಕೆ ಆಸೆ ಪಡುವಿರಿ.

೧)ದೇವರನ್ನೇಕೆ ಹುಡುಕುವಿರಿ.
--------------------------------------

ಎಲ್ಲಿಯೂ ಕಾಣದ ದೇವರನ್ನೇಕೆ ಹುಡುಕುವಿರಿ, ದೇವರಿರುವನು ನಿಮ್ಮ ನಡುವೆ ಅದು ರೂಪದಲ್ಲಾದರು ಸರಿ, ದೇವರನ್ನು ಕಾಣುವ ಮಾನವೀಯ ಕಣ್ಣೀರಬೇಕು ಅಷ್ಟೇ.

     ದೇವರಿರುವನು ನಿಮ್ಮ ಮಕ್ಕಳ ರೂಪದಲ್ಲಿ, ತಂದೆತಾಯಿಯ ರೂಪದಲ್ಲಿ, ಮಡದಿ ರೂಪದಲ್ಲಿ, ಸಹೋದರ/ಸಹೋದರಿಯ ರೂಪದಲ್ಲಿ, ನಿಮ್ಮ ಸ್ನೇಹಿತರ ರೂಪದಲ್ಲಿ. ಕಷ್ಟದಲ್ಲಿ ನಿಮಗೆ ಸಹಾಯ ಮಾಡುವ ಜನರ ರೂಪದಲ್ಲಿ .

ನಿಮಗೂ ದೇವರಾಗುವ ಬಯಕೆ ಇದ್ದರೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ. ಕಷ್ಟಕಾಲದ ಸಹಾಯವೇ ಅವರಿಗೆ ವರ, ವರ ಕೊಡುವವನು ದೇವರು ಮಾತ್ರ ಅಲ್ಲವೆ.

೨)ಆ ಧರ್ಮ ಈ ಧರ್ಮ ಅಂತೇಕೆ ಬಡಿದಾಡುವಿರಿ.
----------------------------------------------------------------

ಧರ್ಮದ ಹೆಸರಲ್ಲಿ ಜಗತ್ತಿನ ತುಂಬಾ ಅದೆಷ್ಟೋ ಮಾರಣಾಹೋಮ ನಡೆದಿದೆಯೊ ಲೆಕ್ಕವಿಲ್ಲ. ಧರ್ಮದ ಹಣೆಪಟ್ಟಿ ಕಟ್ಟಿಕೊಂಡು ಅಧರ್ಮದ ದಾರಿಯಲ್ಲಿ ನಡೆಯುತ್ತಾ ರಕ್ತದೊಕುಳಿ ನಡೆಸುತ್ತಿರುವರನ್ನು ನೋಡಿದರೆ ಮನಸ್ಸು ಸಂಕಟವಾಗುತ್ತದೆ. ಧರ್ಮದ ಮೂಲ ಆಶಯವನ್ನು ಗಾಳಿಗೆ ತೂರಿದ ಕಟುಕರನ್ನು ಸರಿದಾರಿಗೆ ತರುವರಾರು? .

   ಧರ್ಮದ ವಿಚಾರದಲ್ಲಿ ಬಸವಣ್ಣನವರನ್ನು ನೆನೆಯಲೆಬೇಕು . "ದಯವೇ ಧರ್ಮದ ಮೂಲವಯ್ಯ" ಎಂದು ಒಂದೇ ವಾಕ್ಯದಲ್ಲಿ ಹೇಳಿದ ಮಹಾನ್ ಚೇತನ .

ನಿಜ ಧರ್ಮ ವೆಂದರೆ ದಯೇ , ಪ್ರೀತಿ, ಸ್ನೇಹ. ಜನರು ಪಾಲಿಸು ಪಂಥ ಯಾವುದೇ ಇರಲಿ,  ಸಕಲರನ್ನು ಪ್ರೀತಿಯದಿ , ಸ್ನೇಹದಿ ಕಾಣುವುದೇ ನಿಜವಾದ ಧರ್ಮ ಅದು ವಿಶ್ವಮಾನವನ ಧರ್ಮ .

೩)ಬದುಕಿದ್ದಾಗ ಸಿಗದ ಸ್ವರ್ಗ ಸತ್ತ ಮೇಲೆ ------------------------------------------------- ಅನುಭವಿಸಲೇಕೆ ಆಸೆ ಪಡುವಿರಿ.
---------------------------------------

ಮೇಲಿನ ಎರಡನ್ನೂ ಪಾಲಿಸಿದರೆ ಸ್ವರ್ಗ ನಿಮ್ಮೆದುರೆ ಮನಬಿಚ್ಚಿ ಕೊಳ್ಳಲಿದೆ.

#ಸತೀಶಬಾರಿ

Friday, July 15, 2016

Fb

ಮೊದಲನೆಯ ಮದುವೇ ಆಗುವ ಇರುವ ಕಷ್ಟ

ಎರಡನೇ ಮದುವೆ ಆಗುವಾಗ ಆ ಕಷ್ಟ ಇರುವುದಿಲ್ಲವಂತೆ

Experience's make's man perfect

Saturday, July 2, 2016

ಮುಂದುವರೆಯುತ್ತದೆ

ಕಣ್ಣ ತುಂಬಿಕೊಬೇಡ ಸಖಿ
ನೋಡಲಾಗದು ನಿನ್ನ ಅಳುಮೊಗವ

ನಿನ್ನ ಕಣ್ಣ ರಪ್ಪೆಯಾಗಿ ನಾನಿರುವೆ
ನಿನ್ನ ಕಣ್ಣ ಹನಿಗೆ ನಾನೇ ಮೊದಲು ತೊಯುವೆ

ಅರಿಯಬಲ್ಲೆ ನಿನ್ನ ಹೃದಯ ಭಾಷೆಯ
ನಾ ತಿಳಿಯ ಬಲ್ಲೆ ನಿನ್ನ ಭಾವನೆಯ

ಬಾ ನಿನ್ನ ಇನಿಯನ ಸನಿಹ
ಅಪ್ಪಿಕೊಂಡು ಮರೆಸುವೆ ನಿನ್ನ ದುಃಖವ